ಅನಿತಾ ಸುತಾರಗೆ ಗ್ರಾಮಸ್ಥರಿಂದ ಗೌರವ ಸನ್ಮಾನ
ಮಾಂಜರಿ 13 : ಇತ್ತೀಚಿಗೆ ಕರ ವಸೂಲಿಗಾರ ಹುದ್ದೆಯಿಂದ ಬಡ್ತಿ ಹೊಂದಿ ಗ್ರೇಡ್ 2 ಕಾರ್ಯದರ್ಶಿ ಹುದ್ದೆಯ ಆದೇಶ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ಪಡೆದು ನಸಲಾಪುರ ಗ್ರಾಮ ಪಂಚಾಯತಿಗೆ ನೇಮಕಗೊಂಡ ಶ್ರೀಮತಿ ಅನಿತಾ ರಾವಸಾಬ ಸುತಾರ ಇವರಿಗೆ ನೆರೆಹೊರೆಯವರು ಮತ್ತು ಮಹಿಳಾ ಸ್ನೇಹ ಬಳಗದವರು ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದರು.
ಈ ವೇಳೆ ಮಾತನಾಡಿದ ಅಬ್ದುಲ ತಾಂಬಟ ಮಹಿಳೆಯಾಗಿ ದಿಟ್ಟತನದಿಂದ ಗ್ರಾಮದ ಜನರ ಸೇವೆ ಸಲ್ಲಿಸುತ್ತ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿ ಅನಿತಾ ಅವರು ಸಲ್ಲಿಸುತ್ತಿರುವ ಸೇವೆ ಅವಿಸ್ಮಯ.ನೆರೆಹೊರೆಯವರೊಂದಿಗೆ ಸಹಕಾರ ಸ್ನೇಹ ದಿಂದ ವ್ಯವಹರಿಸುವ ವ್ಯಕ್ತಿತ್ವ ಮತ್ತು ಸಮಸ್ಯೆ ಎಂದು ಬಂದ ಗ್ರಾಮದ ಬಡವರ ಕೆಲಸಕಾರ್ಯ ಬಹುಬೇಗನೆ ಮಾಡಿ ಕೊಡುವ ಇವರ ಸ್ವಭಾವವನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಸುವರ್ಣ ಬಡಿಗೇರ ಸುರೇಖಾ ಬಡಿಗೇರ ದಾನಮ್ಮ ಬಡಿಗೇರ್ ಮಂಜುಳಾ ಸುತಾರ ಲಕ್ಷ್ಮೀಬಾಯಿ ಸುತಾರ ಗೀತಾ ಸುತಾರ ರೋಹನ ಬಡಿಗೇರ, ರಶೀದಾ ತಾಂಬಟ, ಯಾಸ್ಮಿನ ತಾಂಬಟ, ಮುನೇರಾ ತಾಂಬಟ, ಡಾ. ಸುಮಯ್ಯಾ ತಾಂಬಟ, ಅಬ್ದುಲ ತಾಂಬಟ, ಸುಧಾಕರ ಸುತಾರ, ಸಮೀವುಲ್ಲಾ ತಾಠಟ, ಶಬ್ಬೀರ ತಾಂಬಟ,ಅಲ್ತಾಫ ತಾಂಬಟ, ಇಸ್ಮಾಯಿಲ ತಾಂಬಟ,ಜಯಪಾಲ ಸುತಾರ, ಶೇಖರ ಸುತಾರ ಸೇರಿದಂತೆ ಗ್ರಾಮಸ್ಥರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು. ಅಮರ ತಾಂಬಟ ಸ್ವಾಗತಿಸಿದರು. ಅಬ್ದುಲ ತಾಂಬಟ ನಿರೂಪಿಸಿ ವಂದಿಸಿದರು.