ಹೆಚ್ಚಿನ ಬಿಸಿಲಿನ ತಾಪ: ಮಳೆಯಿಲ್ಲದೆ ಒಣಗುತ್ತಿರುವ ಬೆಳೆ
ಮಾಂಜರಿ 13 : ಮಹಾರಾಷ್ಟ್ರದ ಗಡಿ ಚಿಕ್ಕೋಡಿ ಅಥಣಿ ನಿಪ್ಪಾಣಿ ಕಾಗವಾಡ ತಾಲೂಕಿನಲ್ಲಿ ಅಕ್ಟೋಬರ್ ಕೊರತೆಯಿಂದ ತಿಂಗಳದಲ್ಲಿ ಬಿಸಿಲಿನ ಬೇಗೆ ಹೆಚ್ಚಿದೆ. ಮಳೆಯ ವಾತಾವರಣದಲ್ಲಿ ಬದಲಾವಣೆಯಾಗಿದ್ದು, ಬಿಸಿಲ ಝಳಕ್ಕೆ ಜನರು ಹೈರಾಣಾಗಿದ್ದಾರೆ.
ಬಿಸಲಿನ ಬಗೆಯಿಂದ ಹೊರಗೆ ಓಡಾಡುವಂತಾಗಿದೆ ಒಂದು ವಾರದಿಂದ ಉಷ್ಣಾಂಶ ವಿರುಪೇರಾಗಿದ್ದು, ಬಿಸಿಲು ಹೆಚ್ಚಾಗಿರುವುದರಿಂದ ಕಾರ್ಮಿಕರು, ತರಕಾರಿ, ಹಣ್ಣು ಹಂಪದ ಮಾರಾಟಗಾರರ ಸೇರಿ ಜನಸಾಮಾನ್ಯರು ಪರದಾಡುವಂತಾಗಿದೆ. ಮಳೆಗಾಲದಲ್ಲೇಈರೀತಿಯಾದರೆ ಮುಂದೆ ಹೇಗೆ ಎಂಬ ಆತಂಕ ಜನರನ್ನು ಕಾಡುತ್ತಿದೆ. ಮಳೆ ಇಲ್ಲದೆ ಜಮೀನಿನಲ್ಲಿ ಬೆಳೆಗಳು ಒಣಿಗುತ್ತಿದೆ. ಬಿಸಿಲು ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಮಳೆ ಸುರಿಯುತ್ತಿಲ್ಲ, ನೀರಿಲ್ಲದೆ ಬೆಳೆ ನಷ್ಟದ ಆತಂಕ ರೈತರನ್ನು ಕಾಡುತ್ತಿದೆ. ಹವಾಮಾನ ವೈಪರೀತ್ಯದಿಂದ ಧಗೆ ಹೆಚ್ಚಾಗಿದ್ದು, ರೋಗ ರುಜಿನಗಳು ಹರಡಲಾರಂಭಿಸಿವೆ.
ಕಳೆದ ವರ್ಷ ಅಕ್ಟೋಬರ್‌ಗೆ ಹೋಲಿಸಿದರೆ ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಿದೆ. ಅಕ್ಟೋಬರ್. ನವೆಂಬರ್ ತಿಂಗಳಲ್ಲಿ ಈ ಪರಿ ಬಿಸಿಲನ್ನು ಹಿಂದೆ ಕಂಡಿರಲಿಲ್ಲ. ಕಳೆದ ಐದು ವರ್ಷಗಳಲ್ಲಿ ಆಗಾಗ ಮಳೆ ಆಗುತ್ತಿತ್ತು ಈ ತಿಂಗಳಿನಲ್ಲಿ ಬಿಸಿಲು ಇಷ್ಟೊಂದು ಇರಲಿಲ್ಲ, ಆದರೆ ಈಗ ನೋಡಿದರೆ ಭಯವಾಗುತ್ತಿದೆ. ಎಲ್ಲವೂ ಪರಿಸರ ನಾಶದ ಪರಿನಾಮ ಎಂದು ಕಳವಳ ಹಿರಿಯ ನಿವೃತ್ ಇಂಜನೀಯರ ಹಾಗೂ ಪರಿಸರ ಪ್ರೇಮಿ ಅರುಣಕುಮಾರ ಯಲಗುದ್ರಿ, ವ್ಯಕ್ತಪಡಿಸಿದರು
ಅವರೀಗತೇವಾಂತದ ಕೊರತೆ, ಹವಾಮಾನದ ವೈಪರೀತ್ಯ ಮಳೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಸಹಜವಾಗಿಯೇ ಬಿಸಿಲು ಏರಿಕೆಯಾಗಿದೆ ಎಂದು
ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಸದ್ಯ ಒಂದು ಮಳೆಯಾದರೆ ಉಪ್ಪಾಂಶ ಇಳಿಯಲಿದೆ. ಪರಿಸರ ಆಸಮತೋಲನದಿಂದ ಬೆಸಿಲು ಹೆಚ್ಚಾಗಿದೆ. ಈ ಬಗ್ಗೆ ನಾವು ಗಂಭೀರವಾಗಿ ಆಲೋಚಿಸುವ ಅಗತ್ಯ ಇದೆ.