ಕೊಪ್ಪಳ

ಜ್ಞಾನಗಂಗೋತ್ರಿ ವಿದ್ಯಾಸಂಸ್ಥೆ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಬಸವರಾಜ್ ಇನ್ನಿಲ್ಲ

ಜ್ಞಾನಗಂಗೋತ್ರಿ ವಿದ್ಯಾಸಂಸ್ಥೆ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಬಸವರಾಜ್ ಇನ್ನಿಲ್ಲ
Basavaraj, who established the Jnanagangotri Educational Institution and provided education to hundr

ಲೋಕದರ್ಶನ ವರದಿ 

ಕೊಟ್ಟೂರು  08: ಚಟ್ರಿಕಿ ಬಸವರಾಜ್ ಇನ್ನಿಲ್ಲ,  ಕೊಟ್ಟೂರು ನಗರದ ಖ್ಯಾತ ಉದ್ಯಮಿ, ಶ್ರೀಬೇಕರಿ ಮಾಲೀಕ ರಾದ ಚಟ್ರಿಕಿ ಬಸವರಾಜ್ 67  ಇನ್ನಿಲ್ಲ.. ಮೃತರು 3 ಪುತ್ರರು ಹಾಗೂ ಧರ್ಮಪತ್ನಿ ಯನ್ನು ಆಗಲಿದ್ದಾರೆ, ಮೃತರು ಬ್ರೆಡ್ ಮಾರಿ ಬಡತನದಿಂದ ಬಂದರು ಸಹ, ನಂತರ ಜ್ಞಾನಗಂಗೋತ್ರಿ ವಿದ್ಯಾ ಸಂಸ್ಥೆ ಕಟ್ಟಿ,  ಅದರ ಅಧ್ಯಕ್ಷರಾಗಿ  ನೂರಾರು ವಿದ್ಯಾರ್ಥಿ ಗಳಿಗೆ ಶಿಕ್ಷಣ ಕೊಡಿಸಿದ್ದಾರೆ,  ಎಲ್ಲಾ ಕ್ಷೇತ್ರ ಗಳಲ್ಲಿ ಛಾಪು ಮೂಡಿಸಿದ್ದ ಮೃತರು, ರಾಜಕೀಯ ಕ್ಷೇತ್ರದಲ್ಲಿ ಚಾಪೂ ಮೂಡಿಸಿ, ಪಟ್ಟಣ ಪಂಚಾಯತಿಯ ಗೌರವಾನ್ವಿತ ಸದಸ್ಯರಾಗಿ, ಎಂ ಎಂ ಜೆ ಕುಟುಂಬದ ಜೊತೆ ರಾಜಕೀಯ ಮಾಡುತ್ತಿದ್ದರು,

ಮೃತರ ಪಕ್ಕ ವ್ಯವಸ್ಥೆಗೆ ವ್ಯವಹಾರ ಮಾಡುತ್ತಿದ್ದರು ಸೆಟ್ಲ್‌ ಕೋರ್ಟ್‌ ನಿರ್ಮಿಸಿ ಯುವಕರಿಗೆ ಅಡಲು ಉತ್ಸಾಹ ತುಂಬುತ್ತಿದ್ದರು.. ಮೃತರು  ಪಕ್ಕ ವ್ಯವಾರಸ್ತರಾಗಿ ಎಲ್‌ಐಸಿಗೆ ಏಜೆಂಟರ ಸಹ ಆಗಿದ್ದರು  ಮೃತರ ಕುಟುಂಬ ಕ್ಕೇ ಶಾಂತಿ ಕೋರಿ, ಹಾಲಿ,  ಮಾಜಿ ಶಾಸಕರು, ಬೀಜ ನಿಗಮದ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಜೆ. ಬಸವರಾಜ, ಶಿವನಗುತ್ತಿ, ಬಾಬಯ್ಯ, ಜ್ಞಾನ ಗಂಗೋತ್ರಿ ವಿದ್ಯಾ ಸಂಸ್ಥೆಯ ಬೋಧಕ ಬೋಧಕರ ಸಿಬ್ಬಂದಿ, ಶಟಲ್ ಕೋರ್ಟ್‌ ಅಸೋಸಿಯೇಷನ್, ಸೇರಿದಂತೆ ಅನೇಕರು ಕಂಬನಿ ಮಡಿದಿದ್ದಾರೆ. 


ಸುದ್ದಿ ಓದಿ