ಕ.ಸಾ.ಪ. ಚುನಾವಣಾ ಕಣಕ್ಕೆ ಅಭ್ಯರ್ಥಿಯಾಗಿ ಅಮರೇಶ್ ಮೈಲಾಪುರ ಆಯ್ಕೆ
ಕೊಪ್ಪಳ:7. ಕೊಪ್ಪಳ ನಗರದ ನೌಕರರ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ಸರ್ವಾನು ಮತದಿಂದ ಶಿಕ್ಷಕ ಮತ್ತು ಸಂಘಟಕರು ಆಗಿರುವ ಅಮರೇಶ ಮೈಲಾಪುರ ಇವರನ್ನು ಆಯ್ಕೆ ಮಾಡಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ನಿಕಟ ಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿತೇಜ ಅಬ್ಬಿಗೇರಿ ಅವರು ಮಾತನಾಡಿ, ನಾನು ಏಳು ತಾಲೂಕಿನ ಆಜೀವ ಸದಸ್ಯರಲ್ಲಿ ಮನವಿಯನ್ನು ಮಾಡಿಕೊಳ್ಳುತ್ತೇನೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಕ್ರಿಯಾಶೀಲತೆಯನ್ನು ತಂದುಕೊಡಲು ಅಮರೇಶ ಮೈಲಾಪುರರವರನ್ನು ಗೆಲ್ಲಿಸುವ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಗರಿಗೆದುರುವಂತೆ ಮಾಡಬೇಕಾಗಿದೆ. ಕಾರಣ ಅಮರೇಶ ಮೈಲಾಪುರ ಅವರನ್ನು ಸರ್ವ ಆಜೀವ ಸದಸ್ಯರು ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕಾಗಿ ವಿನಂತಿ ಮಾಡಿಕೊಂಡರು.