ಗಂಗಾವತಿ

ಜಿಲ್ಲಾಮಟ್ಟದ ಕ್ರೀಡಾಕೂಟ: ಶಾರದಾ ಕಾಲೇಜು ವಿದ್ಯಾರ್ಥಿಗಳಿಂದ 7 ಪ್ರಥಮ ಸ್ಥಾನ

ಜಿಲ್ಲಾಮಟ್ಟದ ಕ್ರೀಡಾಕೂಟ: ಶಾರದಾ ಕಾಲೇಜು ವಿದ್ಯಾರ್ಥಿಗಳಿಂದ 7 ಪ್ರಥಮ ಸ್ಥಾನ


ಗಂಗಾವತಿ 8: ನಗರದ ವಿದ್ಯಾನಗರದಲ್ಲಿರುವ ಶಾರದಾ ವಿದ್ಯಾ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈ.ಜೆ.ಆರ್‌. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಜಿಲ್ಲಾಮಟ್ಟದಲ್ಲಿ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ 7 ವಿಭಾಗಗಳಲ್ಲಿ ಪ್ರಥಮ ಸ್ಥಾನ ಹಾಗೂ 3 ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಪ್ರಥಮ ಸ್ಥಾನ ಪಡೆದವರು:

ಬಾಲಕಿಯರ ಹ್ಯಾಂಡ್ಬಾಲ್ನಲ್ಲಿ ಗೀತಿಕಾ ಮತ್ತು ತಂಡ, ಬಾಲಕರ ಹ್ಯಾಂಡ್ಬಾಲ್ನಲ್ಲಿ ವೈ. ಗೋಪಿಕೃಷ್ಣ ಮತ್ತು ಕೃಷ್ಣ, ಹ್ಯಾಮರ್ ಥ್ರೋನಲ್ಲಿ ನಿಜಾಮುದ್ದೀನ್, ಕರಾಟೆಯಲ್ಲಿ ಮರ್ದಾನ್ ಅಲಿ, ಬಾಕ್ಸಿಂಗ್ನಲ್ಲಿ ಮರ್ದಾನ್ ಅಲಿ, ಚೆಸ್ನಲ್ಲಿ ಶರತ್ ಕುಮಾರ್ ಹಾಗೂ ಪೋಲ್ ವಾಲ್ಟ್ನಲ್ಲಿ ಪ್ರಥಮ್‌.ದ್ವಿತೀಯ ಸ್ಥಾನ ಪಡೆದವರು: ಹೈಜಂಪ್ನಲ್ಲಿ ಜಾಗೃತಿ, ಬಾಲಕರ ಟೇಬಲ್ ಟೆನಿಸ್ನಲ್ಲಿ ಬಾಲಕರ ತಂಡ ಹಾಗೂ ಬಾಲಕಿಯರ ಟೇಬಲ್ ಟೆನಿಸ್ನಲ್ಲಿ ಬಾಲಕಿಯರ ತಂಡ.  

ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷರಾದ ಕಲ್ಯಾಣಂ ಜಾನಕಿರಾಮ್ ಮಾತನಾಡಿ, ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಬೆಳೆಸುವುದು ಅಗತ್ಯ. ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.ಈ ಸಂದರ್ಭದಲ್ಲಿ ಪ್ರಾಂಶುಪಾಲ ಬಿ. ಕೋಟೆಯ ಚೌದರಿ, ಕಾಲೇಜಿನ ಆಡಳಿತ ಅಧಿಕಾರಿ ಕಲ್ಯಾಣಂ ಜೈದೀಪ್, ವೈಸ್ ಪ್ರಿನ್ಸಿಪಾಲ್ ನಾಗಮಣಿ, ವೆಂಕಟೇಶ್, ಮಾಳಪ್ಪ, ದೈಹಿಕ ಶಿಕ್ಷಕರು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ