ಉಪ್ಪಾರ ಸಮಾಜದಿಂದ ನೂತನ ಡಿಸಿಸಿ ಅಧ್ಯಕ್ಷರಿಗೆ ಸನ್ಮಾನ
ಲೋಕದರ್ಶನ ವರದಿ
ಉಪ್ಪಾರ ಸಮಾಜದಿಂದ ನೂತನ ಡಿಸಿಸಿ ಅಧ್ಯಕ್ಷರಿಗೆ ಸನ್ಮಾನ
ಗಂಗಾವತಿ 04: ಕೊಪ್ಪಳ ಜಿಲ್ಲಾ ಕಾಂಗ್ರೆಸ್ ನೂತನ ಸಾರಥಿಯಾಗಿ ಅಧಿಕಾರ ವಹಿಸಿಕೊಂಡ ಮಾಜಿ ಸಚಿವ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪರವರಿಗೆ ಗಂಗಾವತಿ ತಾಲೂಕು ಉಪ್ಪಾರ ಸಮಾಜದಿಂದ ಸನ್ಮಾನಿಸಲಾಯಿತು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ನಿಮ್ಮ ಅವಧಿಯಲ್ಲಿ ಸದೃಢವಾಗಲಿ, ನೆಪಥ್ಯಕ್ಕೆ ಸರಿದ ಕಾರ್ಯಕರ್ತರನ್ನು ಗುರತಿಸಿ ಪಕ್ಷ ಬಲವರ್ದನೆಗೆ ಶ್ರಮಿಸಿ ಎಂದು ಸಮಾಜದ ಹಿರಿಯರು ಹಾರೈಸಿದರು.
ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಅಮರಜ್ಯೋತಿ ವೆಂಕಟೇಶ್, ಕಾಯಾಧ್ಯಕ್ಷ ಮುಕ್ಕಣ್ಣ ಮಾನಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ದಾನಪ್ಪ ದರೋಜಿ, ಹಿರಿಯರಾದ ರಾಮಣ್ಣ ಕುರಿತಲೆ, ವಾಸುದೇವ ಜಂಬಣ್ಣ, ಹುಲಿಗಿ ಯಂಕಪ್ಪ, ವಿಐಪಿ ಮೆಲೋಡಿಸ್ ಪಂಪಾಪತಿ ಇಂಗಳಗಿ, ಪ್ರಭುವಕೀಲರು, ಶರಣಪ್ಪ ಮಿಣಜಿಗಿ ವಕೀಲರು, ಮಾನಳ್ಳಿ ಹನುಮಂತಪ್ಪ, ಸಮಾಜದ ಉಪಾಧ್ಯಕ್ಷ ಗೋವಿಂದಪ್ಪ ಹುಲಿಗಿ, ಪ್ರಮುಖರಾದ ಯಂಕಪ್ಪ ಕೊಂಡಿಕಾರ ಇತರರಿದ್ದರು.