ಶ್ರೀ ಶಾರದಾ ವಿದ್ಯಾ ಸಂಸ್ಥೆಗೆ ಶುದ್ಧ ಕುಡಿಯುವ ನೀರಿನ ಘಟಕ ದೇಣಿಗೆಹಳೆಯ ವಿದ್ಯಾರ್ಥಿನಿಯ ಕುಟುಂಬದಿಂದ ಮಾದರಿ ಸೇವೆ : ಎಸ್. ಪ್ರಸಾದ
ಗಂಗಾವತಿ, ಅ.28: ನಗರದ ವಿದ್ಯಾನಗರದಲ್ಲಿರುವ ಶ್ರೀ ಶಾರದಾ ವಿದ್ಯಾ ಸಂಸ್ಥೆಯ ತೆಲುಗು ಮಾಧ್ಯಮ ಶಾಲೆಯಲ್ಲಿ ಅಧ್ಯಯನ ಮಾಡಿದ ಮೊದಲ ಬ್ಯಾಚ್ನ ವಿದ್ಯಾರ್ಥಿಯಾಗಿರುವ ಶ್ರೀಯುತ ಭೂಪತಿರಾಜು ವೆಂಕಟಪತಿರಾಜು ಹಾಗೂ ಅವರ ಧರ್ಮಪತ್ನಿ ಬಿ.ಎಚ್. ವರಲಕ್ಷ್ಮಿ ಬಾಲಕುಮಾರಿ ದಂಪತಿಯ ಹಿರಿಯ ಪುತ್ರಿ ಗೊಕರಾಜು ಸ್ವಾತಿ ಅವರು, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶ್ರೀ ಶಾರದಾ ವಿದ್ಯಾ ಸಂಸ್ಥೆಯ ಎಸ್ಜಿವಿಆರ್ ಆಂಗ್ಲ ಮಾಧ್ಯಮ ಮತ್ತು ತೆಲುಗು ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ದೇಣಿಗೆಯಾಗಿ ನೀಡಿದ್ದಾರೆ.
ಅಕ್ಟೋಬರ್ 28ರಂದು ಶಾಲಾ ಆವರಣದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್. ಪ್ರಸಾದ್ ಮಾತನಾಡಿ, ತಾವು ಕಲಿತ ವಿದ್ಯಾಸಂಸ್ಥೆಯ ಮೇಲಿನ ಅಭಿಮಾನ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಕಾಳಜಿಯಿಂದ ಸ್ವಾತಿ ಅವರು ನೀಡಿರುವ ಈ ಕೊಡುಗೆ ಶ್ಲಾಘನೀಯವಾಗಿದೆ. ಇಂತಹ ಸೇವಾ ಮನೋಭಾವವನ್ನು ನಮ್ಮ ಆಡಳಿತ ಮಂಡಳಿಯ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ಹಾಗೂ ಶಿಕ್ಷಣ ಸಂಸ್ಥೆಗೆ ತಮ್ಮ ಕೈಲಾದ ಕೊಡುಗೆ ನೀಡುವ ಮನೋಭಾವ ಎಲ್ಲರಲ್ಲೂ ಮೂಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಟಿ.ವಿ. ಸತ್ಯನಾರಾಯಣ, ಕಾರ್ಯದರ್ಶಿಗಳಾದ ರಾವಿ ರಾಜಶೇಖರ್, ಸಹಕಾರ್ಯದರ್ಶಿಗಳಾದ ಕಮ್ಮ ಕೋಟೇಶ್ವರರಾವ್, ಆಡಳಿತ ಮಂಡಳಿ ಸದಸ್ಯರಾದ ಕೆ.ಬಿ.ಜಿ.ಕೆ. ರೆಡ್ಡಿ, ಎಸ್. ವೆಂಕಟೇಶ್ವರರಾವ್, ಜಿ. ರವಿಕುಮಾರ್, ಟಿ.ವಿ. ಸುಬ್ಬಾರಾವ್ ಸೇರಿದಂತೆ ಆಡಳಿತ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ತಾವು ಕಲಿತ ಶಾಲೆಯ ಮೇಲಿನ ಪ್ರೀತಿ, ಕೃತಜ್ಞತೆ ಮತ್ತು ಇಂದಿನ ಮಕ್ಕಳ ಆರೋಗ್ಯದ ಕಾಳಜಿಯಿಂದ ಹಳೆಯ ವಿದ್ಯಾರ್ಥಿನಿ ನೀಡಿದ ಈ ಕೊಡುಗೆ ಇತರರಿಗೂ ಪ್ರೇರಣೆಯಾಗಿದ್ದು,
ಶಿಕ್ಷಣ ಸಂಸ್ಥೆಯ ಮೇಲಿನ ಹಳೆಯ ವಿದ್ಯಾರ್ಥಿಗಳ ಬಾಂಧವ್ಯಕ್ಕೆ ಉತ್ತಮ ನಿದರ್ಶನವಾಗಿದೆ.ಕಾರ್ಯಕ್ರಮದ ಯಶಸ್ಸಿಗೆ ಸಂಸ್ಥೆಯ ಆಡಳಿತಾಧಿಕಾರಿಗಳಾದ ವೈ. ಸುದರ್ಶನ್ರಾವ್, ಶೈಕ್ಷಣಿಕ ಪ್ರಗತಿ ಪರೀಶೀಲಕರಾದ ಪಂಪನಗೌಡ, ಮುಖ್ಯೋಪಾಧ್ಯಾಯರಾದ ಉದಯಶ್ರೀ, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.