ಕೊಪ್ಪಳ

ಪಿ. ಎಚ್‌. ಡಿ. ಪದವಿ ಪಡೆದಿದ್ದಕ್ಕಾಗಿ ಸಂತೋಷ್ ಕುಮಾರ್ ದಾನಿವರಿಗೆ ಅಭಿನಂದನೆಗಳು

ಪಿ. ಎಚ್‌. ಡಿ. ಪದವಿ ಪಡೆದಿದ್ದಕ್ಕಾಗಿ ಸಂತೋಷ್ ಕುಮಾರ್ ದಾನಿವರಿಗೆ ಅಭಿನಂದನೆಗಳು

ಲೋಕದರ್ಶನ ವರದಿ  

   ಭಾಗ್ಯನಗರ 28:  ಸ್ಥಳೀಯ ಭಾಗ್ಯನಗರದ ನಿವಾಸಿಗಳಾದ  ಶ್ರೀ ಎಚ್‌. ಡಿ. ದಾನಿ ಮತ್ತು ಶ್ರೀಮತಿ ಸುಜಾತ ದಾನಿಯವರ ಸುಪುತ್ರನಾದ ಸಂತೋಷ್ ಕುಮಾರ ದಾನಿಯವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯ  ಭೌತಶಾಸ್ತ್ರ ಪ್ರಾಧ್ಯಾಪಕರಾದ  ಡಾ.ಖಡ್ಕೆ ಉದಯ್ ಕುಮಾರವರ  ಮಾರ್ಗದರ್ಶನದಲ್ಲಿ ಭೌತಶಾಸ್ತ್ರದ ವಿಷಯವಾದ  “ರೇಡಿಯೇಶನ್ ಇಂಡೋಸ್ಡ್‌ ಮಾಡಿಫಿಕೇಶನ್  ಆಫ್ ಪೆರೋ ಎಲೆಕ್ಟ್ರಿಕಲ್ ಪಾಲಿಮಾರ್ ಕಾಂಪೋಸಿಟ್ಸ್‌”  ಎಂಬ ವಿಷಯದ ಮೇಲೆ ತಮ್ಮ ಪಿ. ಎಚ್‌. ಡಿ. ಪ್ರೌಢ ಪ್ರಬಂಧವನ್ನು ಮಂಡಿಸಿ  ಯಶಸ್ವಿಯಾಗಿ ಪಿ. ಎಚ್‌. ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.  ಶ್ರೀ ಸಂತೋಷ್ ಕುಮಾರ ದಾನಿಯವರು ಈ ಮೊದಲು ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯ ಕೊಪ್ಪಳದಲ್ಲಿ  ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ.  ಇವರ ಪಿಎಚ್ಡಿ ಪದವಿ ಪಡೆದ ಈ ಸಂತೋಷದ ಕ್ಷಣದಲ್ಲಿ  ಪ್ರಾಧ್ಯಾಪಕರು, ಗೆಳೆಯರು, ಪಾಲಕರು ಹಾಗೂ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ಸಮಸ್ತ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. 


ಸುದ್ದಿ ಓದಿ