ಗಂಗಾವತಿ

5ನೇ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಅದ್ಭುತ ಸಾಧನೆ

5ನೇ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಅದ್ಭುತ ಸಾಧನೆ

ಗಂಗಾವತಿ 12: ಕಳೆದ ವಾರ ಹೈದರಾಬಾದ್‌ನಲ್ಲಿ ಆಯೋಜಿಸಲಾದ 5ನೇ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಗಂಗಾವತಿಯ ಬುಲ್ ಕರಾಟೆ ಅಕಾಡೆಮಿಯ ವಿದ್ಯಾರ್ಥಿಗಳಾದ ಮಾಸ್ಟರ್ ವರದ್ ಪ್ರವೀಣ್ ಕುಮಾರ್ ವೈಧ್ಯ ಹಾಗೂ ವೇದಾಂಶಿಕಾ ಪ್ರವೀಣ್ ಕುಮಾರ್ ವೈಧ್ಯ ಅವರು ಅತ್ಯುತ್ತಮ ಸಾಧನೆ ಮಾಡಿ ತಾಲೂಕು ಹಾಗೂ ಜಿಲ್ಲೆಯ ಗೌರವವನ್ನು ಹೆಚ್ಚಿಸಿದ್ದಾರೆ.  

ಈ ಪ್ರತಿಷ್ಠಿತ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಮಾಸ್ಟರ್ ವರದ್ ಪ್ರವೀಣ್ ಕುಮಾರ್ ವೈಧ್ಯ ಅವರು ಕುಮಿಟೆ ವಿಭಾಗದಲ್ಲಿ 1ನೇ ಸ್ಥಾನ ಕಟಾ ವಿಭಾಗದಲ್ಲಿ 2ನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಅದೇ ರೀತಿ ವೇದಾಂಶಿಕಾ ಪ್ರವೀಣ್ ಕುಮಾರ್ ವೈಧ್ಯ ಅವರು ಕಟಾ ವಿಭಾಗದಲ್ಲಿ 1ನೇ ಸ್ಥಾನ ಕುಮಿಟೆ ವಿಭಾಗದಲ್ಲಿ 3ನೇ ಸ್ಥಾನ ಗಳಿಸಿ ಪ್ರಶಂಸನೀಯ ಸಾಧನೆ ಮಾಡಿದ್ದಾರೆ. ಇಬ್ಬರೂ ವಿದ್ಯಾರ್ಥಿಗಳು ಗಂಗಾವತಿಯ ಬುಲ್ ಕರಾಟೆ ಅಕಾಡೆಮಿಯಲ್ಲಿ ಕರಾಟೆ ಗುರು ಶ್ರೀ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು, ಅವರ ಶಿಸ್ತಿನ ತರಬೇತಿ, ಪರಿಶ್ರಮ ಮತ್ತು ಸಮರೆ​‍್ಣಯ ಫಲವಾಗಿ ಈ ಮಹತ್ವದ ಸಾಧನೆ ಸಾಧ್ಯವಾಗಿದೆ.  

ಈ ಸಾಧನೆಗೆ ಮಾಸ್ಟರ್ ವರದ್ ಹಾಗೂ ವೇದಾಂಶಿಕಾ ಅವರಿಗೆ ಪಾಲಕರು, ಶಿಕ್ಷಕರು, ಸ್ನೇಹಿತರು ಹಾಗೂ ಸ್ಥಳೀಯ ಗಣ್ಯರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಸಾಧನೆ ಮಾಡುವಂತೆ ಶುಭ ಹಾರೈಕೆಗಳು. 


ಸುದ್ದಿ ಓದಿ