ಆಧುನಿಕ ಮಾರುಕಟ್ಟೆ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ
ಗದಗ 14: ಮಾರುಕಟ್ಟೆ ಆರ್ಥಿಕತೆಯ ಜೀವಾಳ-ಸಂಡೂರ ಶ್ವೇತಾ ಕೆ.ಎಲ್.ಇ. ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗದಗದ ವಾಣಿಜ್ಯ ವಿಭಾಗದ ವತಿಯಿಂದ ದಿನಾಂಕ 14 ಅಕ್ಟೋಬರ್ 2026ರಂದು ಬೆಳಿಗ್ಗೆ 9:00ರಿಂದ 11:00 ಗಂಟೆಯವರೆಗೆ “ಆಧುನಿಕ ಮಾರುಕಟ್ಟೆ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ. ಸಂಡೂರು ಶ್ವೇತಾ ಸುರೇಶ್, ಎಂ.ಜಿ.ಆರಿ್ಡ.ಪಿ.ಆರ್.ಯು., ಗದಗದ ಎಂ.ಕಾಂ. ವಿಭಾಗದ ಸಂಯೋಜಕರು, ಭಾಗವಹಿಸಿದ್ದರು. ಅವರು ತಮ್ಮ ಉಪನ್ಯಾಸದಲ್ಲಿ ಆಧುನಿಕ ಮಾರುಕಟ್ಟೆಯ ಸ್ವರೂಪ, ಅದರಲ್ಲಾಗುತ್ತಿರುವ ಬದಲಾವಣೆಗಳು ಹಾಗೂ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾರುಕಟ್ಟೆಯ ಮಹತ್ವವನ್ನು ವಿವರಿಸಿದರು. ಉಪನ್ಯಾಸದಲ್ಲಿ ಮಾರುಕಟ್ಟೆ ಪ್ರಚಾರದ ಪರಿಕಲ್ಪನೆ, ಮಹತ್ವ, ಉದ್ದೇಶಗಳು ಮತ್ತು ವಿವಿಧ ಪ್ರಕಾರಗಳ ಕುರಿತು ಮಾಹಿತಿ ನೀಡಲಾಯಿತು. ವೈಯಕ್ತಿಕ ಮಾರಾಟ, ಜಾಹೀರಾತು, ಸಾರ್ವಜನಿಕ ಸಂಪರ್ಕ ಹಾಗೂ ಮಾರಾಟ ಉತ್ತೇಜನದಂತಹ ಪ್ರಚಾರ ವಿಧಾನಗಳನ್ನು ಪರಿಣಾಮಕಾರಿಯಾಗಿ ಬಳಸುವ ಅಗತ್ಯವನ್ನು ಅವರು ತಿಳಿಸಿದರು. ಅಲ್ಲದೆ, ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ಮತ್ತು ಗ್ರಾಹಕರನ್ನು ಆಕರ್ಷಿಸಲು ಪ್ರಚಾರ ಮಿಶ್ರಣದ ಪಾತ್ರವನ್ನು ವಿವರಿಸಿದರು. ಇಂದಿನ ಡಿಜಿಟಲ್ ಯುಗದಲ್ಲಿ ಆನ್ಲೈನ್ ಮಾರುಕಟ್ಟೆ, ನೇರ ಮಾರುಕಟ್ಟೆ, ಸೇವಾ ಮಾರುಕಟ್ಟೆ, ಸಾಮಾಜಿಕ ಮಾರುಕಟ್ಟೆ, ಹಸಿರು ಮಾರುಕಟ್ಟೆ ಹಾಗೂ ಗ್ರಾಮೀಣ ಮಾರುಕಟ್ಟೆಯ ಬೆಳವಣಿಗೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಬೆಳಕು ಚೆಲ್ಲಿದರು. ಕಾರ್ಯಕ್ರಮದ ಯಶಸ್ಸಿಗೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎ. ಕೆ. ಮಠ, ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಎಸ್. ಸಿ. ನಿಲುಗಲ್ ಹಾಗೂ ಸಹಸಂಯೋಜಕರಾದ ಪ್ರೊ. ತೇಜಸ್ವಿನಿ ರಾಚನಗೌಡ್ರ ಅವರ ಮಾರ್ಗದರ್ಶನ ಮತ್ತು ಸಹಕಾರ ಮಹತ್ವದ ಪಾತ್ರ ವಹಿಸಿತು. ಒಟ್ಟಿನಲ್ಲಿ, ಈ ವಿಶೇಷ ಉಪನ್ಯಾಸ ಕಾರ್ಯಕ್ರಮವು ವಿದ್ಯಾರ್ಥಿಗಳ ಮಾರುಕಟ್ಟೆ ಜ್ಞಾನವನ್ನು ವಿಸ್ತರಿಸುವಲ್ಲಿ ಮತ್ತು ಪ್ರಸ್ತುತ ವ್ಯಾಪಾರಿಕ ಪರಿಸರದ ಕುರಿತು ಅರಿವು ಮೂಡಿಸುವಲ್ಲಿ ಉಪಯುಕ್ತವಾಯಿತು. ಕಾರ್ಯಕ್ರಮವು ಶೈಕ್ಷಣಿಕವಾಗಿ ಅರ್ಥಪೂರ್ಣ ಹಾಗೂ ಜ್ಞಾನವರ್ಧಕವಾಗಿ ಯಶಸ್ವಿಯಾಯಿತು.