ಶಿಗ್ಗಾವ್

101 ಮುತೈದೆಯರಿಗೆ ಉಡಿ ತುಂಬಿದ ಸಧ್ಬಕ್ತರು

101 ಮುತೈದೆಯರಿಗೆ ಉಡಿ ತುಂಬಿದ ಸಧ್ಬಕ್ತರು

ಶಿಗ್ಗಾವಿ 14 : ಪಟ್ಟಣದ ಶ್ರೀ ಗ್ರಾಮದೇವತೆ ದ್ಯಾಮವ್ವದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ  ದೇವಿಯ ಮೂರ್ತಿಗೆ ವಿಶೇಷ ಪೂಜೆ ಹಾಗೂ ಅವರ ಸಂಕಲ್ಪದಂತೆ ಗ್ರಾಮದೇವತೆ ದ್ಯಾಮವ್ವದೇವಿ ಓಣಿಯ ಸದ್ಬಕ್ತರು101 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನೇರವೇರಿಸಿ ನಂತರ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಿದರು.  ಈ ಸಂದರ್ಭದಲ್ಲಿ ಗ್ರಾಮದೇವತೆ ದ್ಯಾಮವ್ವದೇವಿ ಓಣಿಯ ರೇಖಾ ಗಿರಿಮಠ, ರತ್ನಾ ಗಾಣಿಗೇರ, ಸಂಧ್ಯಾ ಬೆಳಗಲಿ, ಸುಜಾತಾ ಬಡಿಗೇರ, ಶ್ರೀದೇವಿ ಕಮ್ಮಾರ್, ವೇದಾ ಹಿರೇಮಠ, ಜ್ಯೋತಿ ಚಿಕ್ಕಮಠ, ವಿದ್ಯಾ ಈಳಿಗೆರ, ಗಂಗಾ ಗಾಣಿಗೇರ, ಗೌರಮ್ಮ ಬಡಿಗೇರ, ಶಂಕ್ರಮ್ಮ ಬಡಿಗೇರ ಸೇರಿದಂತೆ ಸದ್ಬಕ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ