ಶಿಗ್ಗಾವ್

ಧರ್ಮ ಜಾಗೃತಿ ಮೂಡಿಸುವುದೇ ಶರನ್ನವರಾತ್ರಿ ಉದ್ದೇಶ : ಎಂ.ಸಿ.ಕುನ್ನೂರ

ಧರ್ಮ ಜಾಗೃತಿ ಮೂಡಿಸುವುದೇ ಶರನ್ನವರಾತ್ರಿ ಉದ್ದೇಶ : ಎಂ.ಸಿ.ಕುನ್ನೂರ


  

ಶಿಗ್ಗಾವಿ  12: 9 ದಿನಗಳ ಕಾಲ ನಿರಂತರ ಗ್ರಾಮದೇವಿ ದ್ಯಾಮವ್ವದೇವಿ ಸೇವೆಯನ್ನು ಮಾಡಿ ಪುರಾಣ ಪ್ರವಚನಕಾರರ ಮೂಲಕ ಧರ್ಮ ಜಾಗೃತಿ ಮೂಡಿಸುವುದೇ ಶರನ್ನವರಾತ್ರಿ ಕಾರ್ಯಕ್ರಮದ ಉದ್ದೇಶ ಎಂದು ಮಾಜಿ ಸಂಸದ ಎಂ.ಸಿ.ಕುನ್ನೂರ ಹೇಳಿದರು.  ಪಟ್ಟಣದ ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಶರನ್ನವರಾತ್ರಿ ಕಾರ್ಯಕ್ರಮದ ಅಂಗವಾಗಿ ದೇವಿ ಮಹಾ ಪುರಾಣ ಪ್ರವಚನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಬದುಕನ್ನು ಉತ್ತಮವಾಗಿ ನಿರ್ವಹಿಸಲು ಹಾಗೂ ನಮ್ಮ ದಿನನಿತ್ಯದ ನೋವು ನಲಿವುಗಳಿಗೆ ಸ್ಪಂದಿಸಲು ಮತ್ತು ಅಂಕು ಡೊಂಕುಗಳನ್ನು ತಿದ್ದಿಕೊಳ್ಳಲು ಇಂತಹ ದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಅವಶ್ಯಕತೆ ಬಹಳವಿದೆ ಎಂದರು. ದಿವ್ಯ ಸಾನಿಧ್ಯವಹಿಸಿ ಗಂಜೀಗಟ್ಟಿ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸಮ್ಮುಖವಹಿಸಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಆರ್ಶಿವದಿಸಿದರು.  ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ ಆ ದೇವಿಗೆ ನಿರಂತರವಾಗಿ ಪೂಜ್ಯ ಭಾವನೆಯಿಂದ ಪ್ರಾರ್ಥನೆ ಮಾಡಿದರೆ ನಮಗೆ ಆ ದೇವಿ ರಕ್ಷಿಸುತ್ತಾಳೆ. ಆದರೆ ಈ ಭಾರಿ ದೇವಿ ಮುನಿಸಿಕೊಂಡ ಕಾರಣ ರಾಜ್ಯಾದ್ಯಂತ ಬೀಕರ ಬರಗಾಲ ಆವರಿಸಿದೆ ಅದನ್ನು ತಾಯಿ ಪರಿಹರಿಸಲು ಇಂದು ನಾವು ಶರನ್ನವರಾತ್ರಿಯ ಪುರಾಣ ಪ್ರವಚನ ಮೂಲಕ ಸಂಸ್ಕಾರವನ್ನು ಕಲಿಸಿ ನಮ್ಮ ಆತ್ಮ ಸುದ್ದಿಯನ್ನು ಮಾಡಿಕೊಳ್ಳಬೇಕು ಎಂದರು.  ದೇವಿ ಪುರಾಣ ಪ್ರವಚನವನ್ನು ಪಂ.ಪುಟ್ಟರಾಜ ಕವಿಗವಾಯಿಗಳ ಶಿಷ್ಯ ಪ್ರಭಯ್ಯಶಾಸ್ತ್ರೀ ಹಿರೇಮಠ, ಸಂಗೀತ ಸೇವೆ ಶಿವಾನಂದ ವಂದೇವಾಲ, ತಬಲಾ ಸೇವೆ ಬಸವರಾಜ ಚಳಗೇರಿ ಅವರಿಂದ ಜರುಗಿತು.  ಮಾಜಿ ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಜಯಣ್ಣಾ ಹೆಸರೂರ,ದತ್ತಣ್ಣಾ ವೇರ್ಣೇಕರ,ಟಿ.ವ್ಹಿ.ಸುರಗೀಮಠ, ಸಿದ್ದಣ್ಣಾ ಮೊರಬದ, ಶ್ರೀಕಾಂತ ಬುಳ್ಳಕ್ಕನವರ, ರಮೇಶ ವನಹಳ್ಳಿ, ಪಕ್ಕೀರ​‍್ಪ ಕುಂದೂರ, ಈರಣ್ಣಾ ಬಡ್ಡಿ, ಪಕ್ಕೀರ​‍್ಪ ಯಲಿಗಾರ, ಭರಮಜ್ಜ ನವಲಗುಂದ, ಶಂಕರಗೌಡ ಪಾಟೀಲ, ಶಿವಪ್ಪ ಗಂಜೀಗಟ್ಟಿ, ಮಲ್ಲಯ್ಯ ಹಿರೇಮಠ, ಮಾಲತೇಶ ಯಲಿಗಾರ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ