ಬಳ್ಳಾರಿ

ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದಲ್ಲಿ ಬಳ್ಳಾರಿ ರಾಜ್ಯ ಸಮ್ಮೇಳನಕ್ಕೆ ಪ್ರಥಮ ಆದ್ಯತೆ : ಜಾಣಗೆರೆ ವೆಂಕಟರಾಮಯ್ಯ

ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದಲ್ಲಿ ಬಳ್ಳಾರಿ ರಾಜ್ಯ ಸಮ್ಮೇಳನಕ್ಕೆ  ಪ್ರಥಮ ಆದ್ಯತೆ :  ಜಾಣಗೆರೆ ವೆಂಕಟರಾಮಯ್ಯ

ಬಳ್ಳಾರಿ ಅ. 14 : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೂರ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ತನ್ನು ಒಂದು ಶತಮಾನಗಳ ಹಿಂದೆ ಸ್ಥಾಪಿಸಿದ್ದರು ಆದರೆ ಅವರ ಆಶಯಗಳನ್ನು ಕಳೆದ ಅವಧಿಯ  ಅಧ್ಯಕ್ಷರ ಹಡಾವುಡಿ ಕೆಲಸಗಳಿಂದ 6 ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ  ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳಂಕ ಉಂಟಾಗಿದೆ ಇದನ್ನು ಹೋಗಲಾಡಿಸಲು ನಾನು ಈ ಸಾಲಿನ ಚುನಾವಣೆಗೆ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ  ನನ್ನ ಗೆಲುವಿಗೆ ಪರಿಷತ್ತಿನ ಎಲ್ಲಾ ಅಜೀವ ಸದಸ್ಯರುಗಳು  ಸಹಕಾರ ನೀಡಬೇಕೆಂದು ರಾಜ್ಯ ಸಮಿತಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಜಾಣಗೆರೆ ವೆಂಕಟರಾಮಯ್ಯ ಮನವಿ ಮಾಡಿದರು . ಅವರು ಈ ವಿಷಯದ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಕಳೆದ ಸಾಲಿನ ಅಧ್ಯಕ್ಷ ಪರಿಷತ್ತಿನಲ್ಲಿ ನಿಯಮಗಳನ್ನು ಮೀರಿ ಸಭೆಗಳನ್ನು ನಡೆಸುವುದು ಹಣವನ್ನು ಖರ್ಚು ಮಾಡುವುದು ಸೇರಿದಂತೆ  ಹಲವಾರು ಅಕ್ರಮಗಳನ್ನು ನಡೆಸಿ  ಪ್ರಶ್ನಿಸಿದವರನ್ನು ನಿಮ್ಮ ಸದಸ್ಯತ್ವವನ್ನು ರದ್ದುಗೊಳಿಸುತ್ತೇನೆ ಎಂದು ಬೆದರಿಸುತ್ತಾ ಈಗ ವಿಚಾರಣೆಯಿಂದ ತಮ್ಮ ಸದಸ್ಯತ್ವವನ್ನೇ ಕಳೆದುಕೊಂಡಿದ್ದಾರೆ ಇದು ಕನ್ನಡಿಗರ ಸಂಸ್ಥೆಯ ಗೌರವ ಘನತೆಯಾಗಿದೆ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.  ಜಿ ರಾಮಮೂರ್ತಿಯಂತ ನಾಯಕರು ರಾಜಕಾರಣಿಗಳು ಪರಿಷತ್ತಿನ ಅಧ್ಯಕ್ಷರಾದಾಗ ಯಾವುದೇ ರಾಜಕಾರಣ ಮತ್ತು ರಾಜಕಾರಣಿಗಳನ್ನು ಒಳಕ್ಕೆ ಬಿಟ್ಟುಕೊಳ್ಳದೆ ಪ್ರಾಮಾಣಿಕವಾಗಿ ಕನ್ನಡ ಸೇವೆ ಮಾಡಿದ್ದರು ಅದೇ ರೀತಿಯಾಗಿ ನಾನು ಸಹ ಯಾವುದೇ ರಾಜಕಾರಣ ಮಾಡದೆ ಸ್ವಾಯುತ್ತ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆಯನ್ನು ಮಾಡುತ್ತೇನೆ ಅತ್ಯಂತ ಪ್ರಮುಖವಾಗಿ ಕನ್ನಡ ಕನ್ನಡ ನಿಘಂಟು ಮುದ್ರಣ ನಿಂತು ಹೋದ ಮಾಸಿಕ ಕನ್ನಡ ನುಡಿ ದಿನಪತ್ರಿಕೆ ಮರು ಜಾರಿಗೊಳಿಸಲು ಪ್ರಯತ್ನಿಸುತ್ತೇನೆ ಎಲ್ಲಾ ಪರಿಷತ್ತಿನ ಸದಸ್ಯರು ನನಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಈ ಪತ್ರಿಕಾಗೋಕ್ತಿಯಲ್ಲಿ ಹಿರಿಯ ವಿಚಾರವಾದಿ ಪ್ರಗತಿಪರ ಚಿಂತಕರಾದ ಸ್ಜಿ ಸಿದ್ದರಾಮಯ್ಯ ಕವಯತ್ರಿ ವಸುಂದರ ಭೂಪತಿ ಕೊಪ್ಪಳ ಜಿಲ್ಲೆಯ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಶೇಖರ್ ಗೌಡ  ಮಾಲಿ ಪಾಟೀಲ್, ಬಳ್ಳಾರಿ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷರಾದ ಹಂಪನಗೌಡ, ಜಿಲ್ಲಾ ಕಾರ್ಯದರ್ಶಿ ಶಿವಲಿಂಗಪ್ಪ ಹಂದಿಹಾಳ್ ಸಾಹಿತಿ ವೀರೇಂದ್ರ ರವಿಹಾಳ್, ಕರವೇ ಕಾವಲು ಪಡೆಯ ಎಸ್ ಸುರೇಶ್ ಚಂದ್ರಶೇಖರ್ ಆಚಾರಿ ಸೇರಿದಂತೆ  ಇತರರಿದ್ದರು. 


ಸುದ್ದಿ ಓದಿ