18ರಂದು ಹಿಂದೂ ಜಾಗೃತಿ ಬೃಹತ್ ಮೆರವಣಿಗೆ
ರಾಣೆಬೆನ್ನೂರು 14 : ಹಿಂದೂ ಧರ್ಮದ ಪರಂಪರಾಗತ ವೈಭವವನ್ನು ಸಾರಲು ಪ್ರತಿ ವರ್ಷದಂತೆ ಈ ವರ್ಷವೂ ಸಹ, ರಾಣೆಬೆನ್ನೂರು ನಗರದ ಶ್ರೀ ಶಿವ ಪ್ರತಿಷ್ಠಾನ ಹಿಂದುಸ್ತಾನ ಇದೇ 18, 2026 ರಂದು ರವಿವಾರ ಸೂರ್ಯೋದಯ ಕಾಲ ಬೆಳಗಿನ 6-45 ಸಮಯದಲ್ಲಿ- 2026ನೇ ಸಾಲಿನ ಶ್ರೀ ದುರ್ಗಾ ಮಾತಾ ದೌಡ ಹಿಂದೂ ಜಾಗೃತಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದೆ.ಅಂದು ಸೂರ್ಯೋದಯ ಕಾಲ ನಗರದ ಜನನಿ ಬಿಡ ಪ್ರದೇಶವಾದ ಸಂಗಮ್ ವೃತ್ತದಿಂದ ಭಾರಿ ಮಹಿಳಾ ಸಮುದಾಯದ ಬೃಹತ್ ಮೆರವಣಿಗೆ ಧರ್ಮ ಜಾಗೃತಿ ಉತ್ಸವದ ಮೆರವಣಿಗೆ ನಡೆಯುವುದು. ಇಂದು ಸಂಸ್ಕೃತಿ ಮತ್ತು ಧರ್ಮ ಜಾಗೃತಿಯ ಸಂಕೇತವಾಗಿ ಅತ್ಯಂತ ಭಕ್ತಿ ಭಾವದೊಂದಿಗೆ ನಡೆಯುವ ಈ ಭವ್ಯ ಮೆರವಣಿಗೆಯಲ್ಲಿ ಹಿಂದೂ ಬಾಂಧವರು ಮತ್ತು ಮಾತಾ ಭಾಗವಹಿಸಿ ದೇಶದ ಪರಂಪರೆ ಸಾರಿ ಸಂಸ್ಕೃತಿಯ ಪುನರುತ್ಥಾನಕ್ಕೆ ಸಾಕ್ಷಿ ಯಾಗಬೇಕೆಂದು ಶ್ರೀ ಶಿವ ಪ್ರತಿಷ್ಠಾನ ಹಿಂದುಸ್ತಾನ ಸಮಿತಿಯು ಪ್ರಕಟಣೆಯಲ್ಲಿ ಕೋರಿದೆ.