ವಿಜಯಪುರ

ಅ.22ರಂದು ಸಾರ್ವಜನಿಕ ಬನ್ನಿ ವಿನಿಮಯ ಕಾಠ್ಯಕ್ರಮ ಆಯೋಜನೆ

ಅ.22ರಂದು ಸಾರ್ವಜನಿಕ ಬನ್ನಿ ವಿನಿಮಯ ಕಾಠ್ಯಕ್ರಮ ಆಯೋಜನೆ

ಲೋಕದರ್ಶನ ವರದಿ 

ದೇವರಹಿಪ್ಪರಗಿ 19: ಪ್ರತಿ ವರ್ಷದಂತೆ ಈ ವರ್ಷವು ವಿಜಯದಶಮಿ ಹಬ್ಬದ ಪ್ರಯುಕ್ತ ಅ.22ರಂದು ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ವಿಜಯಪುರದ ಸ್ವಗೃಹದಲ್ಲಿ ಸಾರ್ವಜನಿಕ ಬನ್ನಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಮಾಜಿ ಸಚಿವರಾದ ದಿ.ಬಿ.ಎಸ್‌.ಪಾಟೀಲ ಸಾಸನೂರ ಅವರು ಹಲವು ವರ್ಷಗಳಿಂದ ಹಾಕಿಕೊಟ್ಟ ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ಮುಖಂಡರು, ಗುರು-ಹಿರಿಯರು, ಶಾಸಕರ ಅಭಿಮಾನಿಗಳು, ಹಿತೈಸಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಬಿಜೆಪಿ ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ