ಸಚಿವ ಎಂ.ಬಿ. ಪಾಟೀಲರ ಜನಪರ ಕಾರ್ಯಕ್ಕೆ ಮೆಚ್ಚುಗೆ
ವಿಜಯಪುರ 19: ಸಿದ್ಧೇಶ್ವರ ಶ್ರೀಗಳ ಆಶಯದಂತೆ ಜನಾನುರಾಗಿ ಕಾಯಕದಲ್ಲಿ ನಿರತರಾಗಿರುವ ಸಚಿವ ಎಂ. ಬಿ. ಪಾಟೀಲ ಅವರು ರಾಜ ಋಷಿ ಇದ್ದಂತೆ. ರಾಜ್ಯದಲ್ಲಿ ಅವರು ಉನ್ನತ ಸ್ಥಾನಕ್ಕೇರಲಿದ್ದಾರೆ ಎಂದು ಪಂಡಿತ ಮಧ್ವಾಚಾರ್ಯ ಮೊಕಾಶಿ ಹೇಳಿದ್ದಾರೆ. ಇಂದು ಸೋಮವಾರ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ನಗರದ ನಿಂಬರಗಿ ಬಡವಾಣೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ದುರ್ಗಾಷ್ಟಮಿ ಪೂಜೆಯಲ್ಲಿ ಪಾಲ್ಗೋಂಡರು.
ಈ ಸಂದರ್ಭದಲ್ಲಿ ಸಚಿವರನ್ನು ಗೌರವಿಸಿ ಪಂಡಿತ ಮಧ್ವಾಚಾರ್ಯ ಮೊಕಾಶಿ ಮಾತನಾಡಿದರು. ಎಂ.ಬಿ. ಪಾಟೀಲ ಅವರು ನಮಗೆಲ್ಲ ನೀರು ನೀಡಿ ಪುಣ್ಯ ಕಟ್ಟಿಕೊಂಡಿದ್ದಾರೆ. ಸಿದ್ದೇಶ್ವರ ಶ್ರೀಗಳ ಬಯಕೆಯಂತೆ ನಿರಂತರ ಜನಾನುರಾಗಿ ಕಾಯಕದಲ್ಲಿ ನಿರತರಾಗಿದ್ದಾರೆ. ಇವರು ಉನ್ನತ ಸ್ಥಾನಕ್ಕೇರಿದರೆ ರಾಜ್ಯದಲ್ಲಿ ಶ್ರೇಯೋಭಿವೃದ್ಧಿಯಾಗಲಿದೆ ಎಂದು ಅವರು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ, ಅತ್ಯಂತ ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜೆ ನಡೆದಿದೆ. ಭಕ್ತಿಯ ಭೂಮಿ,
ಶಕ್ತಿಯ ನಾಡಿದು. ಇಲ್ಲಿನ ದೇವಸ್ಥಾನದ ವಾತಾವರಣ ತಿರುಪತಿಯನ್ನು ನೆನಪಿಸುವುಂತಿದೆ. ತಾವೆಲ್ಲ ಶ್ರದ್ಧಾಭಕ್ತಿಯಲ್ಲಿ ಭಾವಪರವಶರಾಗಿ ಪೂಜೆಯಲ್ಲಿ ತೊಡಗಿದ್ದೀರಿ. ದುರ್ಗಾದೇವಿಯ ಹಾಗೂ ವೆಂಕಟೇಶ್ವರರ ಆಶೀರ್ವಾದ ಎಲ್ಲರಿಗೂ ಇರಲಿ, ಮಳೆ ಬೆಳೆಯಾಗಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ವೇದನಿಧಿ ಆಚಾರ್ಯರು, ಡಾ.ಉಪೇಂದ್ರ ನರಸಾಪುರ, ಆನಂದ ಜೋಶಿ, ಆರ್.ಕೆ.ದೇಸಾಯಿ, ಡಾ. ಗೀರೀಶಾಚಾರ್ಯ ಅಕಮಂಚಿ, ಬಾಬುರಾವ ಕುಲಕರ್ಣಿ, ಆರಿ್ಜ.ದೇಸಾಯಿ, ಹಾಗೂ ಸಂತೋಷ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.