ವಿಜಯಪುರ

ಗುಮ್ಮಟ ನಗರದಲ್ಲಿ ನವರಾತ್ರಿ ಸೀರೆ ಉಡುಗೆ ಸಂಭ್ರಮವಸುಂಧರೆಯರ ನವಿಲು ಹಸಿರೋಲ್ಲಾಸ !

ಗುಮ್ಮಟ ನಗರದಲ್ಲಿ ನವರಾತ್ರಿ ಸೀರೆ ಉಡುಗೆ ಸಂಭ್ರಮವಸುಂಧರೆಯರ ನವಿಲು ಹಸಿರೋಲ್ಲಾಸ !
In the 'City of Domes,' the Navaratri saree-wearing festivities unfold—a peacock-green exuberance am


 ವಿಜಯಪುರ 19:  ಒಂಬತ್ತು ದಿನಗಳ ನವರಾತ್ರಿ ನವೋಲ್ಲಾಸ ಸಂಭ್ರಮ ಗುಮ್ಮಟ ನಗರಿಯ ನಾರಿಮಣಿಗಳ ಲೋಕದಲ್ಲಿ ಮನೆಮಾಡಿ ಶೃಂಗಾರ ವೈಭವದ ಹೊದಿಕೆ ಸೃಷ್ಟಿಸಿತು.ಸೋಮವಾರ ಅಂತಿಮ ದಿನ ಬಣ್ಣ ಬಣ್ಣದ ಸೀರೆ ಧಾರಣೆ ಉತ್ಸವಕ್ಕೆ ತೆರೆಬಿದ್ದಿತ್ತು. ಒಂಬತ್ತು ದಿನಗಳ ಕಾಲ ಸ್ಮರಣೀಯ ಸಾಮರಸ್ಯದ ಭಾವನಾತ್ಮಕ ರಸಧಾರೆಯ ಭಕ್ತಿ,ಭಾವನೋಟ ನವರಂಗವಾಗಿ ಮೂಡಿತ್ತು.ಒಂಬತ್ತು ದಿನ ಕಲರರ್ಸ ಉಡುಗೆಗಳಲ್ಲಿ ಭಕ್ತಿ ಸೆಲೆಯಲ್ಲಿ ಮಹಿಳಾ ಬಳಗ ತನ್ಮರಾಗಿ ಭಾವೋನ್ಮಾದ ಬೀರಿದರು.

ನವರಾತ್ರಿ ರಂಗಿನಲ್ಲಿ ತೇಲಿದರು. ನವೋಲ್ಲಾಸದ ನವರಾತ್ರಿ ಹಬ್ಬವು ಸೌಹಾರ್ದತೆ ಕಣಕ್ಕೆ ಸಾಕ್ಷಿಯಾಗಿ ತೆರೆ ಕಂಡಿತು.    ಒಂಬತ್ತು ದಿನಗಳ ಕಾಲ ಮೂಡಿಬಂದ ಮನಭಕ್ತಿ ಸೇವೆ ನಾರಿಶಕ್ತಿಗಳ ಪವಿತ್ರತೆ ಭಾವುಳ್ಳ ಹೃದಯಾಂತರದ ಹೂರಣದಲ್ಲಿ ಘಮಿಸಿತು. ಸಡಗರದ ನವೀನತೆಯಿಂದ ಮೇಳೈಸಿತ್ತು. ಸೋಮವಾರ ನವಿಲು ಹಸಿರು ಬಣ್ಣದ ಸೀರೆ ವಸ್ತ್ರೋತ್ಸವ ರಾರಾಜಿಸಿತು. ಈ ರಂಗಿನ ಸೀರೆ ಕಂಪು,ಇಂಪಾದ ಮೂಡಣದಲ್ಲಿ ನಾರಿಮನಗಳನ್ನು  ನಲಿಸಿತು.

ಸೊಗಸು ಮಿಂಚಿನಲ್ಲಿ ವನಿತೆಯರ ಮೈಮೇಲೆ ನವಿಲು ಹಸಿರು ಬಣ್ಣದ ಪರಿಮಳ ಅಚ್ಚಾಗಿತ್ತು.     ಒಂಬತ್ತು ದಿನಗಳ ಕಾಲ ನಾರಿಭಕ್ತಿ ಅಮೋಘವಾಗಿ ಪುಷ್ಟಿಸಿದ ನವರಾತ್ರೋತ್ಸವ ಸುಧೆ ಅಂತಿಮವಾಗಿ ಸತ್ಕಾರ್ಯ ಚಿಂತನೆಗಳ ಚರಣದಲ್ಲಿ ಸಮಾರೋಪಗೊಂಡಿತು.     ದುಗಾ9ಮಾತೆಯ ಒಂಬತ್ತನೇ ಅವತಾರವೇ ಸಿದ್ದಿರಾತ್ರಿ ದೇವಿ. ಈ ರೂಪ ಮಂಗಲಕರ.ಸಾಧನೆಗೆ ಪ್ರೇರಿತ. ಜ್ಞಾನ ಅನುಗ್ರಹಕ್ಕೆ ಸತ್ವ. ಸಿದ್ಧದಾಯನಿ ಬಲದ ಸಿದ್ದಿರಾತ್ರಿ ದೇವಿ ಆತ್ಮಸಾಕ್ಷಾತ್ಕಾರಣಿ.

ಸಿದ್ದಿರಾತ್ರಿ ದೇವಿಗೆ ಪವನದ ಪೂರ್ಣತೆ, ಸಾಧನೆ,ಸಾಮಥ್ಯ9 ಹೊಂದಿರು ಪ್ರತೀತಿಯಿದೆ. ಸಿದ್ದಿಗಳ ಮಹಾಶಕ್ತಿ ದೇವಿಯ ಪೂಜಾ ಕೈಂಕರ್ಯದ ಆರಾಧನಾ ಸ್ಮರಣೆ ಇಲ್ಲಿ ನವಿಲು ಹಸಿರು ಉಡುಗೆಯಲ್ಲಿ ನಡೆಯಿತು.     ರಾಜಾಜಿ ನಗರದ ವಸುಂಧರೆಯರು ನವರಾತ್ರಿ ಕೊನೆಯ ದಿನ ಸೋಮವಾರ ನಸುಕಿನಲ್ಲಿ ನವಿಲು ಹಸಿರು ಸೀರೆಯನ್ನುಟ್ಟು ಪೂಜಾವಿಧಿ  ನೆರವೇರಿಸಿದರು. ನಾಗರತ್ನಾ ಕುಲಕರ್ಣಿ, ತೇಜಸ್ವಿನಿ ಅವಟಿ, ಮೇಘಾ ಗಾಯಕವಾಡ,  ರಾಜೇಶ್ವರಿ ಕನ್ನೂರ, ರೇಖಾ ಕುಚನೂರ, ಲಕ್ಷ್ಮೀ ಕಂತಿಮಠ, ದ್ರಾಕ್ಷಾಯಣಿ ಅವಟಿ,

ವಿಶಾಲಾಕ್ಷಿ ಬಡಿಗೇರ, ಸುನೀತಾ ಜಾಧವ, ದಾಕ್ಷಾಯಣಿ ಇತರರು ನವಿಲು ಹಸಿರು ಬಣ್ಣದ ಸೀರೆಗಳನ್ನು ಧರಿಸಿ ಮಿನುಗಿದರು.ಪೋಟೋ : ನವರಾತ್ರಿ ಮಹೋತ್ಸವದ ಒಂಬತ್ತನೇ ದಿನ ಸೋಮವಾರ ನವಿಲು ಹಸಿರು ಬಣ್ಣದ ಸೀರೆಯನ್ನುಟ್ಟು ಕಂಗೊಳಿಸಿದ ವಿಜಯಪುರ ರಾಜಾಜಿ ನಗರ ಪ್ರದೇಶದ ಮಹಿಳೆಯರು ಕಂಡಿದ್ದು ಹೀಗೆ ! 


ಸುದ್ದಿ ಓದಿ