ತುಳಜಾಪುರ ಪಾದಯಾತ್ರಿಕರಿಗೆ ದಾಸೋಹ - ವೈದ್ಯಕೀಯ ಸೇವೆ
ಆಲಮೇಲ 19: ತೀರವ ಬರಗಾಲದಿಂದ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ ಹೀಗಾಗಿ ಮಹಾರಾಷ್ಟ್ರದ ತುಳಜಾಪುರದ ಅಂಬಾಭವಾನಿ ದರ್ಶನಕ್ಕೆ ತೆರಳುವ ಪಾದಯಾತ್ರಿಕರು ಮತ್ತು ಅಲ್ಲಲ್ಲಿ ದಾಸೋಹ ವ್ಯವಸ್ಥೆ ಮಾಡುವವರಿಗೆ ನೀರಿನ ಸಮಸ್ಯೆ ಕಂಡು ಬಂದಿದೆ. ಇದನ್ನು ಮುಂಚಿತವಾಗಿ ಪರೀಶೀಲಿಸಿ ಪ್ರತಿ ವರ್ಷದಂತೆ ಈ ವರ್ಷವೂ ದಾಸೋಹ ಹಾಗೂ ಉಚಿತ ಆರೋಗ್ಯ ಸೇವೆ ಮಾಡಲಾಗುವುದು. ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ಬಸವರಾಜ್ ಹೂಗಾರ್ ಹೇಳಿದರು.
ಪಟ್ಟಣದಲ್ಲಿ ವಿವಿಧ ದಾಸೋಹ ಕಮಿಟಿ ಮುಖಂಡರು ಹಮ್ಮಿಕೊಂಡಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತುಳಜಾಪುರದ ಶ್ರೀ ಅಂಬಾ ಭವಾನಿ ದೇವಿ ದರ್ಶನಕ್ಕಾಗಿ ಪಾದಯಾತ್ರೆ ಕೈಗೊಳ್ಳುವ ಭಕ್ತರು ಅನುಕೂಲಕ್ಕಾಗಿ ಆಲಮೇಲ ಪಟ್ಟಣದ ವಿವಿಧ ಸಂಘ ಸಂಸ್ಥೆಗಳು ದಾಸೋಹ ಕಮಿಟಿಗಳು ಹಾಗೂ ಗೆಳೆಯರ ಬಳಗದ ವತಿಯಿಂದ ತುಳಜಾಪುರ ಮಾರ್ಗದಲ್ಲಿ ದಾಸೋಹ ಮತ್ತು ಉಚಿತ ವೈದ್ಯಕೀಯ ಸೇವೆ ಕಲ್ಪಿಸಲಾಗುವುದು.
ಭಕ್ತರು ಪ್ರಯಾಣದ ಆಯಾಸ ಕಡಿಮೆ ಮಾಡಿ ಅವರಿಗೆ ಆಹಾರ ಮತ್ತು ವೈದ್ಯಕೀಯ ನೆರವು ಒದಗಿಸುವ ಉದ್ದೇಶದಿಂದ ಅಲಮೇಲದ ಸಂಘಟಕರು ಸೇವಾ ಕಾರ್ಯ ಹಮ್ಮಿಕೊಂಡಿದ್ದಾರೆ. ಪ್ರಾರಂಭದಲ್ಲಿ ಇಂಡಿ ರೈಲ್ವೆ ನಿಲ್ದಾಣದಿಂದ ಸುಮಾರು 3 ಞಟ ಅಂತರದಲ್ಲಿ ಆಲಮೇಲದ ಸಂಗಮೇಶ್ವರ ಮೆಡಿಕಲ್ ಸ್ಟೋರ್ಸ್ ಅವರು ಉಚಿತ ವೈದ್ಯಕೀಯ ಸೇವೆಯ ಮತ್ತು ಎದುರುಗಡೆ ಜೈ ಭವಾನಿ ಬಸ್ಸ್ಟ್ಯಾಂಡ್ ಗೆಳೆಯರ ಬಳಗ ದಾಸೋಹ ಹಮ್ಮಿಕೊಂಡಿದ್ದಾರೆ.
ಇಂಡಿ ತಾಲೂಕಿನ ಹಲಸಂಗಿಯಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿ ಆಲಮೇಲದ ಕನಸು ಫೌಂಡೇಶನ್ ಉಚಿತ ವೈದ್ಯಕೀಯ ಸೇವೆ ಹಲಸಂಗಿ ಕ್ರಾಸ್ ಹೈವೇ ಪಕ್ಕದಲ್ಲಿ. ವಿರಾಮ್ ಹೋಟೆಲ್
ಎದುರಿಗೆ ಆಲಮೇಲ ಅಂಬಾಭವಾನಿ ದಾಸೋಹ ಕಮಿಟಿ ದಾಸೋಹ ವ್ಯವಸ್ತೆ ಮಾಡಿಕೊಂಡಿದೆ. ಸೋಲಾಪುರದಿಂದ ತುಳಜಾಪುರ ಮಾರ್ಗದಲ್ಲಿ ಸೋಲಾಪುರ 10.ಕಿಲೋ ಮೀಟರ್ ಮುಂದಕ್ಕೆ ದಾಸೋಹ ವ್ಯವಸ್ತೆ ಮಾಡಲಾಗಿದೆ ಎಂದು ತಿಳಿಸಿದರು.
ತುಳಜಾಪುರ ಶ್ರೀ ಅಂಬಾಭವಾನಿ ದೇವಿ ದರ್ಶನಕ್ಕಾಗಿ ದೂರದ ಊರುಗಳಿಂದ ಪಾದಯಾತ್ರೆ ಕೈಗೊಳ್ಳುವ ಭಕ್ತರಿಗೆ ಮಾರ್ಗ ಮಧ್ಯದಲ್ಲಿ ಆಹಾರ ಮತ್ತು ವೈದ್ಯಕೀಯ ನೆರವು ಒದಗಿಸಲಾಗಿದ್ದು.ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಸವರಾಜ್ ಹೂಗಾರ.ಪ್ರಶಾಂತ ನಾಶಿ.ವಿಶ್ವನಾಥ ಕೋರಳ್ಳಿ.ಶರಣು ಆಚಲೇರಿ.ಬಸವರಾಜ ಗಾಳಿಮಠ ನಾಗರಾಜ ಗುರುರಾಜ ಕೋಣಶಿರಸಗಿ.ಬಂಡು ಸ್ಥಾವರಮಠ ಗೌತಮ ಯಂಟಮನ ಸೇರಿದಂತೆ ಇತರದಿದ್ದರು.