ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 9 ಆಕಾಂಕ್ಷಿಗಳು
ದಾಂಡೇಲಿ 23 : ದಾಂಡೇಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆ ಕಾಂಗ್ರೆಸ್ ಕಾಂಗ್ರೆಸ್ ವಲಯದಲ್ಲಿ ಕೂತುಹಲ ಮೂಡಿಸಿದೆ. ಹಾಲಿ ಅಧ್ಯಕ್ಷ ಮೋಹನ ಹಲವಾಯಿ ಪುನರಾಯ್ಕೆ ಬಯಸುತ್ತಿದ್ದರೆ, ಅವರ ವಿರುದ್ದ ಪಕ್ಷದೊಳಗೆ ಅಸಮಾಧಾನವನ್ನು ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಅಧ್ಯಕ್ಷ ಸ್ಥಾನಕ್ಕಾಗಿ 9 ಮಂದಿ ಸ್ಪರ್ಧಾಕಣದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಮೋಹನ ಹಲವಾಯಿ ಸೇರಿದಂತೆ ತಸ್ವರ ಸೌದಾಗರ, ಆರ್.ಪಿ. ನಾಯ್ಕ ಎಸ್.ಎಸ್.ಪೂಜಾರ, ಮೊಹಮ್ಮದ್ ರಫೀಕ ಖಾನ, ರಾಜಶೇಖರ ಹರಿಜನ, ಮೋಹಮ್ಮದ್ ಉಸ್ಮಾನ ಶೇಖ, ಇಲಿಯಾಸ್ ಕಾಟಿ ಮತ್ತು ದಾದಾಫೀರ್ ನದೀಮುಲ್ಲಾ ಆಕಾಂಕ್ಷಿಗಳಾಗಿದ್ದಾರೆ.
ಎ.ಐ.ಸಿ.ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 40 ವರ್ಷ ಮೇಲ್ಪಟ್ಟವರು ಮತ್ತು 60 ವರ್ಷದ ಒಳಗಿನವರಿಗೆ ಮಾತ್ರ ಅವಕಾಶ ನೀಡುವ ಕುರಿತು ಸೂಚಿಸಿದ್ದಾರೆ. ಈ ಮಾನದಂಡ ಕಟ್ಟು ನಿಟ್ಟಾಗಿ ಜಾರಿಯಾದರೆ 9 ಸ್ಪರ್ಧೀಗಳ ಪೈಕಿ 6 ಮಂದಿ ಸ್ಪರ್ಧೆಯಿಂದ ಹೊರಬೀಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮೋಹನ ಹಲವಾಯಿ ಮೊಹಮ್ಮದ್ ರಫೀಕ ಖಾನ್ ಹಾಗೂ ರಾಜಶೇಖರ ಈಶ್ವರ್ಪ ಹಾಗೂ ಅವರ ಹೆಸರುಗಳು ಪ್ರಮುಖವಾಗಿ ಚರ್ಚೆಗೆ ಬಂದಿದೆ. ಈ ಬಾರಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಅವಕಾಶ ನೀಡುವ ಸಾಧ್ಯತೆಯ ಚರ್ಚೆಯಿಂದ ಮೊಹಮ್ಮದ್ ರಫೀಕ ಖಾನ ಅವರ ಉಮೇದುವಾರಿಕೆ ಗಮನ ಸಳೆದಿದೆ. ದಲಿತ ಸಮುದಾಯದ ಪ್ರತಿನಿಧಿಯಾಗಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲರಾಗಿರುವ ರಾಜಶೇಖರ ಈಶ್ವರ್ಪ ಹರಿಜನ ಕೂಡಾ ಆಕಾಂಕ್ಷಿಯಾಗಿದ್ದಾರೆ. ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ನಾಯ್ಕ ಅವರ ಸಮಾಲೋಚನೆ ಆಯ್ಕೆ ಪ್ರಕ್ರಿಯೆಯಲ್ಲಿ ಮಹತ್ವ ಪಡೆಯುವ ನೀರೀಕ್ಷೆಯಿದೆ. ವಯೋಮಿತಿ ನಿಯಮಕ್ಕೆ ಸಡಿಲಿಕೆ ದೊರೆಯುತ್ತದೆಯೋ ಹಾಲಿ ಅಧ್ಯಕ್ಷರು ಮುಂದುವರೆಯುತ್ತಾರೆಯೇ ಅಥವಾ ಹೊಸಮುಖಕ್ಕೆ ಅವಕಾಶ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.