ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಸಜ್ಜು
ಲೋಕದರ್ಶನ ವರದಿ
ಕಾರವಾರ 22 : ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಹಿ2026ರ ಗೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಮತದಾನ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಮತದಾನ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಹಾಗೂ ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮತಪೆಟ್ಟಿಗೆ ಸೇರಿದಂತೆ ಇನ್ನಿತರೆ ಚುನಾವಣಾ ಸಾಮಾಗ್ರಿಗಳೊಂದಿಗೆ, ಪೊಲೀಸ್ ಬಂದೋಬಸ್ತ್‌ನೊಂದಿಗೆ ತಮ್ಮ ನಿಯೋಜಿತ ಮತಗಟ್ಟೆಗಳಿಗೆ ಸುರಕ್ಷಿತವಾಗಿ ತಲುಪಿದ್ದು, ಮತದಾನ ಕಾರ್ಯಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
ಅಂಕೋಲಾ ತಹಶೀಲ್ದಾರ್ ಕಚೇರಿಯ ಪಶ್ಚಿಮ ಮತ್ತು ಉತ್ತರ ಭಾಗ, ತಹಶೀಲ್ದಾರ್ ಕಚೇರಿ ಭಟ್ಕಳ, ಕೆ.ಎಚ್.ಇ.ಪಿ. ಹೈಸ್ಕೂಲ್ ಅಂಬಿಕಾನಗರ, ತಾಲೂಕಾ ಆಡಳಿತ ಸೌಧ ದಾಂಡೇಲಿ, ತಹಶೀಲ್ದಾರ್ ಕಚೇರಿ ಹಳಿಯಾಳ, ತಹಶೀಲ್ದಾರ್ ಕಚೇರಿ ಹೊನ್ನಾವರ, ಗ್ರಾಮ ಪಂಚಾಯತ್ ಕಚೇರಿ ಹೇರಂಗಡಿ ಹೊನ್ನಾವರ, ಗ್ರಾಮ ಲೆಕ್ಕಿಗರ ಕಚೇರಿ ರಾಮನಗರ, ತಹಶೀಲ್ದಾರ್ ಕಚೇರಿ, ಚುನಾವಣಾ ವಿಭಾಗ ಜೋಯಿಡಾ, ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಕುರ್ನಿಪೇಟೆ, ಸೇಂಟ್ ಮೈಕಲ್ಸ್ ಕಾನ್ವೆಂಟ್ ಹೈಸ್ಕೂಲ್ ಕಾರವಾರ, 7ನೇ ಎ ತರಗತಿ ಕೊಠಡಿ (ಪಶ್ಚಿಮ ಬದಿ), ಸೇಂಟ್ ಮೈಕಲ್ಸ್ ಕಾನ್ವೆಂಟ್ ಹೈಸ್ಕೂಲ್ ಕಾರವಾರ, 7ನೇ ಬಿ ತರಗತಿ ಕೊಠಡಿ (ಮಧ್ಯ ಭಾಗ), ಉಪ ತಹಶೀಲ್ದಾರ್ ಕಚೇರಿ ನಾಡಕಚೇರಿ, ಗೋಕರ್ಣ,
ತಹಶೀಲ್ದಾರ್ ಕಚೇರಿ ಕುಮಟಾ, ತಹಶೀಲ್ದಾರ್ ಕಚೇರಿ ಕುಮಟಾ, ತಹಶೀಲ್ದಾರ್ ಕಚೇರಿ ಮುಂಡಗೋಡ, ತಹಶೀಲ್ದಾರ್ ಕಚೇರಿ ಸಿದ್ದಾಪುರ, ನಾಡಕಚೇರಿ ಉಮಾಲಮನೆ ಹೇರೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಂದನೆ (ಗುಬ್ಬುಗೊಡ), ಮಾರಿಕಾಂಬಾ ಪಿಯು ಕಾಲೇಜು, ಹೈಸ್ಕೂಲ್ ವಿಭಾಗ, ಕೋರ್ಟ್ ರಸ್ತೆ ಶಿರಸಿ (ದಕ್ಷಿಣ ಬದಿ), ಮಾರಿಕಾಂಬಾ ಪಿಯು ಕಾಲೇಜು, ಹೈಸ್ಕೂಲ್ ವಿಭಾಗ, ಕೋರ್ಟ್ ರಸ್ತೆ ಶಿರಸಿ (ಉತ್ತರ ಬದಿ), ಮಾರಿಕಾಂಬಾ ಪಿಯು ಕಾಲೇಜು, ಹೈಸ್ಕೂಲ್ ವಿಭಾಗ, ಕೋರ್ಟ್ ರಸ್ತೆ ಶಿರಸಿ, ತಹಶೀಲ್ದಾರ್ ಕಚೇರಿ ಯಲ್ಲಾಪುರ, ಉಪ ತಹಶೀಲ್ದಾರ್ ಕಚೇರಿ ಮಂಚಿಕೇರಿಯಲ್ಲಿ ಸೇರಿದಂತೆ ಒಟ್ಟು 25 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.