ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಭವಿಷ್ಯಕ್ಕೆ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಅಗತ್ಯ: ಶ್ಯಾಮಸುಂದರ್ ಅಡಿಗ
ರಾಣೆಬೆನ್ನೂರು 23 : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ತಮ್ಮ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬೇಕಾದರೆ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಂಡು ಜೊತೆಗೆ ಪ್ರಜ್ಞಾಪೂರ್ಣೆತೆಗೆ ಬೇಕಾಗಬಹುದಾದ ಎಲ್ಲ ರೀತಿಯ ಜ್ಞಾನಪೂರ್ಣ ಶಿಕ್ಷಣ ಪಡೆಯಲು ಮುಂದಾದಾಗ ಮಾತ್ರ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಹೇಳಿದರು. ಅವರು ಇಲ್ಲಿನ ಈಶ್ವರ್ ನಗರದ ಬಾಬಾ ರಾಮ ದೇವ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ, ಮಿರಾಕಲ್ ಮಾಸ್ಟರ್ ಮೈಂಡ್ ಶಿಕ್ಷಣ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಇಂದಿನ ಆಧುನಿಕ ಜಗತ್ತಿನಲ್ಲಿ ಮಕ್ಕಳಲ್ಲಿ ಪ್ರಜ್ಞಾವಂತಿಕೆ ಮತ್ತು ದೂರದೃಷ್ಟಿತ್ವ ಅಧಿಕ ಪ್ರಮಾಣದಲ್ಲಿದೆ. ಶಿಕ್ಷಣ ಘಟ್ಟಿಗೊಳಿಸುವಲ್ಲಿ ಪಠ್ಯಕ್ರಮಕ್ಕನುಸಾರವಾಗಿ ಅಳವಡಿಕೆಯಾಗಿದ್ದು, ಪಾಲಕರು ಅದರ ಸದ್ಬಳ ಮಾಡಿಕೊಳ್ಳಬೇಕು, ನಗರಕ್ಕೆ ಅಗತ್ಯವಿದ್ದ ಇಂತಹ ಮಿರಾಕಲ್ ಶಿಕ್ಷಣ ವ್ಯವಸ್ಥೆ ಸಿಕ್ಕಿರುವುದು, ಶಿಕ್ಷಣ ಕೇಂದ್ರ ಪ್ರಾರಂಭವಾಗಿರುವುದು ಸಂತೋಷದ ಸಂಗತಿ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.ಮಿರಾಕಲ್ ಮೈಂಡ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಚಳ್ಳಕೆರೆಯ ಎಂ. ನಿರಂಜನಮೂರ್ತಿ ಅವರು ಮಾತನಾಡಿ, ತಮ್ಮ ಸಂಸ್ಥೆ ಇಂದಿನ ವ್ಯವಸ್ಥೆಗೆ ಅಗತ್ಯವಿರುವ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡು ಸಾಗಿದೆ. ಶಿಕ್ಷಣದ ಪಠ್ಯಕ್ರಮ, ನೀತಿಗೆ ಅನುಸಾರವಾಗಿ ತಮ್ಮ ಸಂಸ್ಥೆಯ ಪಠ್ಯಕ್ರಮ ಮತ್ತು ಕಲಿಕೆಯನ್ನು ಅಳವಡಿಸಿಕೊಂಡು, ರೂಪಿಸಲಾಗಿದೆ ಎಂದರು ಕಾರ್ಯಕ್ರಮದಲ್ಲಿ ಡಾ: ಸಂಜಯ ನಾಯ್ಕ್, ಡಾ. ಚಂದ್ರಶೇಖರ ಕೇಲಗಾರ, ಪ್ರಭುಲಿಂಗಪ್ಪ ಹಲಗೇರಿ, ಎಲ್ಲಪ್ಪ ಜ್ಯೋತಿ, ಮಂಜುನಾಥ್ ದೈವಜ್ಞ, ರಾಮ್ ಸಿಂಗ್ ರಾಥೋಡ, ಮೃತ್ಯುಂಜಯ ಗೋಳೇರ, ಪ್ರಕಾಶ ನಾಯಕ, ಮಲ್ಲಿಕಾರ್ಜುನ ಅಂಗಡಿ ,ಮಂಜುನಾಥ ಬಡಿಗೇರ, ಅಜಯ್ ಮಾಗಳ, ಶಿವರಾಜ ಎಚ್. ಮಂಗಳಾ ಪುಟ್ಟನಗೌಡ್ರು, ನಂದಾ ಎಚ್. ಎಸ್, ಪ್ರಿಯದರ್ಶಿನಿ ಲಿಂಗಾರೆಡ್ಡಿ. ಸೇರಿದಂತೆ ಬಾಗಲಕೋಟೆ ಕುಕನೂರ ಇತರೆ ತಾಲೂಕುಗಳ ಮಿರಾಕಲ್ ಮೈಂಡ್ ಪ್ರಮೋಟಾರ್ ಗಳು ಉಪಸ್ಥಿತರಿದ್ದರು.ಸಂಸ್ಥೆಯ ಪ್ರಿಯದರ್ಶಿನಿ ಲಿಂಗಾರೆಡ್ಡಿ ಪ್ರಾರ್ಥಿಸಿದರು.ವೀರೇಶ್ ಲಮಾಣಿ ಸ್ವಾಗತಿಸಿ, ಕೆ. ಸಿ. ಕೋಮಲಾಚಾರ ನಿರೂಪಿಸಿ, ಸುನಿಲ್ ಲಿಂಗಾರೆಡ್ಡಿ ವಂದಿಸಿದರು.