ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿ ತಲೇ ಪರಾಕ್
ರಾಣಿಬೆನ್ನೂರು 23 : ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಮಾಲತೇಶ್ ಮಾರ್ತಾಂಡ ಭೈರವನ ಸುಕ್ಷೇತ್ರ ದೇವರಗುಡ್ಡ ಗ್ರಾಮದ ಕರಿಯಾಲದಲ್ಲಿ ಸೋಮವಾರ ಸಂಜೆ ನಡೆದ ಕಾರ್ಣಿಕ ದೈವವಾಣಿ, " ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿ ತಲೇ ಪರಾಕ್ " ಎಂಬ ವಾಣಿ ಹೂರಬೀಳುತ್ತಿದ್ದಂತೆಯೇ , ಸೇರಿದ ಲಕ್ಷಾಂತರ ಭಕ್ತರು, ಉತ್ಸಾಹ,ಪ್ರೋತ್ಸಾಹ ಭರಿತರಾಗಿ ಕರಿಯಾಲದಿಂದ ಕರಗಿದ್ದರು. ದೈವ ವಾಣಿ ನುಡಿದ ಕ್ಷೇತ್ರದ ಪರಂಪರಾಗದ ಗೊರವಯ್ಯ ನಾಗಪ್ಪಜ್ಜ ಉರ್ಮಿ, ಅವರ ದೈವ ನುಡಿ ಸಂಕಲ್ಪಕ್ಕೆ ಸಾಕ್ಷಿಯಾದರು. ವಿಶ್ಲೇಷಣೆ:- ಇಲ್ಲಿ ಪ್ರತಿ ವರ್ಷ, ವಾರ್ಷಿಕವಾಗಿ ನುಡಿಯುವ ದೈವ ವಾಣಿಗಾಗಿ ನಾಡು ಮತ್ತು ದೇಶದ ಕೋಟ್ಯಾಂತರ ಭಕ್ತರು ಜಾತಕ ಪಕ್ಷಿಯಂತೆ ಕಾಯುವುದು, ನಂತರ ಪ್ರತಿ ಬಿಂಬಿತ ವಾಣಿಯ ಮೇಲೆ ಈ ವರ್ಷದ ಮಳೆ ಬೆಳೆ ಮತ್ತು ದೇಶದ ರಾಜಕೀಯ ಕುರಿತು ಹತ್ತು- ಹಲವು ತಜ್ಞರು, ಧಾರ್ಮಿಕರು ಆರಾಧಕರು, ಇತಿಹಾಸದ ತಜ್ಞರು ವಿವಿಧ ರೀತಿಯಲ್ಲಿ ವಿಶ್ಲೇಷಣೆ ತಿಳಿಸುತ್ತಾರೆ. ಈ ಬಾರಿಯ ದೈವ ವಾಣಿ, ಮುಂಗಾರು ಕೈ ಕೊಟ್ಟಿದೆ, ಹಿಂಗಾರು ಮಳೆ ಚೆನ್ನಾಗಿ ಆಗಿ ದೇಶವು ಹಸಿರಿನಿಂದ ಕಂಗೊಳಿಸಲಿದೆ. ಅಲ್ಲದೆ ದೇಶದ ರಾಜಕಾರಣದಲ್ಲಿ ಓರ್ವ ಪ್ರಭುದ್ಧ ಸಾಧು- ಸಂತರ ಸ್ಥಾನದಲ್ಲಿರುವ ವ್ಯಕ್ತಿಯೂಬ್ಬರು ಅಧಿಕಾರದ ಪಟ್ಟವನ್ನು ಏರುವರು ಎನ್ನುವುದಾಗಿದೆ. ಎನ್ನುವುದು ಹಲವು ಪ್ರಾಜ್ಞರ ವೈಚಾರಿಕ ಮತ್ತು ವಿಶ್ಲೇಷಣಾತ್ಮಕ ಮಾತುಗಳಾಗಿದ್ದವು. ನಂತರ ದೇವಾಲಯದ ಆವರಣದಲ್ಲಿ 25ಕ್ಕೂ ಹೆಚ್ಚು ಗೊರವಯ್ಯನವರಿಂದ ಸರಪಳಿ ಪವಾಡಗಳು ನಡೆದು ಸಾರ್ವಜನಿಕರಲ್ಲಿ ಆಚ್ಚರಿ ಮೂಡಿಸಿದರು.