ಮೂರ್ತಿ ಉದ್ಘಾಟನೆ: ಸಿದ್ದಲಿಂಗ ಮಹಾಸ್ವಾಮಿಗಳಿಗೆ ಆಹ್ವಾನ
ತಾಳಿಕೋಟಿ 23: ಪಟ್ಟಣದ ರಾಣಾ ಪ್ರತಾಪ ಸಿಂಹ ವೃತ್ತದಲ್ಲಿ ನವೆಂಬರ್ 15 ರಂದು ನಡೆಯಲಿರುವ ಮಹಾರಾಣಾ ಪ್ರತಾಪ್ ಸಿಂಹ ಅವರ ಕಂಚಿನ ಪುತ್ಥಳಿ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಲು ಖಾಸ್ಗತೇಶ್ವರ ಮಠದ ಪೂಜ್ಯ ಸಿದ್ದಲಿಂಗ ದೇವರು ಇವರಿಗೆ ರಜಪೂತ ಸಮಾಜದ ವತಿಯಿಂದ ಆಹ್ವಾನ ನೀಡಲಾಯಿತು. ರಜಪೂತ ಸಮಾಜದ ನಿಯೋಗದ ವತಿಯಿಂದ ಗುರುವಾರ ಪೂಜ್ಯ ಸಿದ್ದಲಿಂಗ ಖಾಸ್ಗತೇಶ್ವರ ಮಠದಲ್ಲಿ ಭೇಟಿ ಮಾಡಿ ಅವರನ್ನು ಈ ಉದ್ಘಾಟನಾ ಸಮಾರಂಭಕ್ಕೆ ಆಮಂತ್ರಿಸಲಾಯಿತು. ಈ ಸಂದರ್ಭದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಸಮಾಜದ ಪ್ರಮುಖರಾದ ಗೋಪಾಲಸಿಂಗ್ ರಜಪೂತ, ಪ್ರಕಾಶ ಹಜೇರಿ, ವಿಜಯಸಿಂಗ್ ಹಜೇರಿ, ರಾಜು ವಿಜಾಪುರ, ನಾರಾಯಣಸಿಂಗ್ ಕೊಕಟನೂರ, ರಮೇಶ ಗೌಡಗೇರಿ, ವಿಠ್ಠಲ್ ಹಜೇರಿ, ಅರುಣ ದಡೇದ ಮತ್ತಿತರರು ಇದ್ದರು.