ತಾಳಿಕೋಟಿ

ತಿಳಗೂಳ ತತ್ವಪದದ ಗಟ್ಟಿನೆಲ - ಶ್ರೀಕಾಂತ ಪತ್ತಾರ

ತಿಳಗೂಳ ತತ್ವಪದದ ಗಟ್ಟಿನೆಲ - ಶ್ರೀಕಾಂತ ಪತ್ತಾರ

ತಾಳಿಕೋಟಿ 23;  ಉತ್ತಮ ಶಿಕ್ಷಣ ಹಾಗೂ ಹೆಚ್ಚು ನೌಕರಿ ಪಡೆದವರನ್ನು ಹೊಂದಿದ ಊರು ಎಂಬ ಖ್ಯಾತಿಯ ತಿಳಗೂಳ, ತತ್ವಪದ ಪರಂಪರೆಯ ಗಟ್ಟಿನೆಲ ಎಂದು ಖ್ಯಾತ ಚಿಂತಕ ವಾಗ್ಮಿ ಹಾಗೂ ತಾಳಿಕೋಟೆಯ ಜೆಎಸ್ ಜಿ ಕಾಲೇಜಿನ ಕಾರ್ಯದರ್ಶಿಗಳಾದ ಶ್ರೀಕಾಂತ ಪತ್ತಾರ ಹೇಳಿದರು.ಕರ್ನಾಟಕ ಜಾನಪದ ಅಕಾಡೆಮಿ 2026 ನೇ ಸಾಲಿಯ ಜಿಲ್ಲೆಯ ವಾರ್ಷಿಕ ವ್ಯಕ್ತಿ ಎಂಬ ಪ್ರಶಸ್ತಿ ಗೆ ಆಯ್ಕೆಗೊಂಡಿರುವ ಶ್ರೀಮತಿ ಭೀಮಬಾಯಿಗೌಡತಿ ಭೀಮನಗೌಡ ಬಿರಾದಾರ ದಂಪತಿಗಳನ್ನು ಮಂಗಳವಾರದಂದು ತಿಳಗೂಳದ ಅವರ ಸ್ವಗೃಹದಲ್ಲಿಸನ್ಮಾನಿಸಿ ಅವರು ಮಾತನಾಡಿದರು.ಭೀಮಬಾಯಿಯವರು ಶಾಲೆ ಕಲಿಯದಿದ್ದರೂ ಪ್ರವಚನ ಮಾಡಬಲ್ಲರು, ನೂರಾರು ತತ್ವಪದಗಳನ್ನು ಒಳ್ಳೆಯ ಲಯ ,ತಾಳಗಳ ಮೇಲೆ ಹಾಡಬಲ್ಲರು .ಇದೆಲ್ಲವೂ ಹೇಗೆ ಸಾಧ್ಯವಾಯಿತು ಎಂದರೆ ಅದಕ್ಕೆ ಸಾವಿರ ತತ್ವಪದಗಳ ಸಂತ,ಯಮನೂರೇಶ ಹಾಗೂ ಪಾರ್ವತೆಮ್ಮಗೌಡತಿ ಯಮನೂರೇಶ ದಂಪತಿಗಳ 30-40 ವರ್ಷಗಳ ಒಡನಾಟದಿಂದ ಸಾಧ್ಯವಾಯಿತು ಎಂಬುದನ್ನು ನಾವು ಸ್ಮರಿಸಬೇಕು ಎಂದರು. ಲಿಂಗದಳ್ಳಿ ಪ್ರೌಢಶಾಲೆಯ ಶಿಕ್ಷಕ ಅಪ್ಪಾಸಾಹೇಬ ಮೂಲಿಮನಿ ಅವರು ಮಾತನಾಡಿ, ಭೀಮಬಾಯಿಗೌಡತಿಯವರು ಆರತಿಪದ,ಜೋಗುಳ ಪದ ,ಸೋಬಾನ ಪದ ಮುಂತಾದಸಾಂಪ್ರದಾಯಿಕ ಹಾಡುಗಳನ್ನು ತಾಯಿ,ಆಯಿಯರಿಂದ ಬಳುವಳಿಯಾಗಿ ಪಡೆದಿದ್ದಾರೆ.ಉತ್ತರ ಕರ್ನಾಟಕದ ತತ್ವಪದ ಪರಂಪರೆಯಲ್ಲಿ ಬೋರಗಿ ಪುರದಾಳ ಗುರು ಶಿಷ್ಯ ಪರಂಪರೆ ಒಂದಾಗಿದ್ದು,ತತ್ವಪದಗಳ ಯಜಮಾನರು ಎನಿಸಿದ ಸದ್ಗುರು ಭೀಮಾಶಂಕರ ಮಹಾರಾಜರಲ್ಲಿ ಶ್ರೀಯುತರು ಸಿಸುಮಕ್ಕಳಾಗಿ,ಸಂಸಾರಿಕ ಬದುಕನ್ನು ಹಾಗೂ ಪಾರಮಾರ್ಥಿಕ ಬದುಕನ್ನು ಶ್ರೀಮಂತಗೊಳಿಸಿಕೊಂಡಿದ್ದಾರೆ.72 ರ ಇಳಿವಯ್ಯಿನಲ್ಲಿ ಅವರಿಗೆ ಪ್ರಶಸ್ತಿ ದೊರಕಿರುವುದು ನಮ್ಮೆಲ್ಲರಿಗೂ ಹೆಮ್ಮೆ ಎಂದರು. ಉಪನ್ಯಾಸಕ ಬಸವರಾಜ ಕುಂಬಾರ ಮಾತನಾಡಿ "ಊರಲ್ಲಿ ಶುಭ ಕಾರ್ಯಗಳು ನಡೆದರೆ ಸಾಂಪ್ರದಾಯದ ಹಾಡುಗಳನ್ನು ಹಾಡುವ ಗೌಡತಿಯವರು,ಶವ ಸಂಸ್ಕಾರದ ಮನೆಯಲ್ಲಿ ಬೆಳಗಾಗುವ ತನಕ ಶಿವನಾಮದ ಮತಿತಾರ್ಥ ತಿಳಿಸುವ ತತ್ವಪದಗಳನ್ನು ಹಾಡುತ್ತಾರೆ.ಅವರಿಗೆ ದೊರೆತದ್ದು ಊರಿಗೆ ಕೀರ್ತಿ ಎನಿಸಿದೆ ಎಂದರು.ತಾಳಿಕೋಟೆ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಗೊರಜಿಯವರು ಮಾತನಾಡಿ " ಹಿರಿಯ ವಯಸ್ಸಿನ ಕಲಾವಿದರನ್ನು ಸರ್ಕಾರ ಗುರ್ತಿಸಿ ಪ್ರಶಸ್ತಿ ನೀಡುತ್ತಿರುವುದು ಸಂಪ್ರದಾಯ ಹಾಡುಗಾರಿಕೆಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಿದೆ ಎಂದರು.ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿರುವುದಕ್ಕೆ ಗುರುಪರಂಪರೆಯ ಅಬ್ಬೆತುಮಕೂರಿನ ಸದ್ಗುರು ವಿಶ್ವಾರಾಧ್ಯಮಠದ ಪೀಠಾಧಿಪತಿಗಳಾದ ಶ್ರೀ ಗಂಗಾಧರ ಮಹಾಸ್ವಾಮಿಗಳು,ಬೋರಗಿ ಪುರದಾಳ ವಿಶ್ವಾರಾಧ್ಯ ಮಠದ ಪೀಠಾಧಿಪತಿಗಳಾದ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಶ್ರೀ ಚಕ್ರಬಗಳಾಂಭ ಶಕ್ರಿಪೀಠದ ಪ.ಪೂ.ಮಹೇಶ್ವರಾನಂದ ತೀರ್ಥ ಮಹಾಸ್ವಾಮಿಗಳು ಹಾಗೂಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ.ಚನ್ನಪ್ಪ ಕಟ್ಟಿ ಅವರು,ಕರ್ನಾಟಕ ಜಾನಪದ ಪರಿಷತ್ತಿನ ಸದಸ್ಯರಾದ ಡಾ.ಎಂ.ಎಂ.ಪಡಶೆಟ್ಟಿ ಅವರುವಿಜಯಪುರದ ಚಾಣಾಕ್ಯ ಕರಿಯರ್ ಅಕಾಡೆಮಿಯ ನಿರ್ದೇಶಕರಾದ ಎನ್‌.ಎಂ.ಬಿರಾದಾರ ಅವರು, ಸಾಹಿತಿಗಳಾದ ಮನು ಪತ್ತಾರ ಕಲಕೇರಿ ಅವರು,ಸಾಹಿತಿ ಶಿಕ್ಷಕಸಾಹೇಬಗೌಡ ಬಿರಾದಾರ,ತತ್ವಪದಗಾಯಕರಾದಬಸವರಾಜ ಬೋರಗಿ ಅವರು,ಹಾಗೂ ತಿಳಗೂಳ ಗ್ರಾಮಸ್ಥರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ