ತಾಳಿಕೋಟಿ ಕಾಳಿಕಾ ದೇವಸ್ಥಾನದಲ್ಲಿ ಶ್ರೀದೇವಿ ಪುರಾಣ ಪಾರಾಯಣ
ತಾಳಿಕೋಟಿ 22 : ಪಟ್ಟಣದ ಕಾಳಿಕಾ ದೇವಿ ದೇವಸ್ಥಾನದಲ್ಲಿ ಕುಬೇರ (ಕುಮಾರ) ಶ್ರೀಶೈಲ ಬಡಿಗೇರ ಇವರು ಒಂಬತ್ತು ದಿನಗಳ ಕಾಲ ನಡೆಸಿಕೊಟ್ಟ ಶ್ರೀದೇವಿ ಪುರಾಣ ಪಾರಾಯಣ ಕಾರ್ಯಕ್ರಮ ಮಂಗಳವಾರ ಭಕ್ತಿ ಭಾವದೊಂದಿಗೆ ಸಂಪನ್ನವಾಯಿತು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜ ತಾಳಿಕೋಟಿ ಇದರ ಅಧ್ಯಕ್ಷರಾದ ಶ್ರೀನಿವಾಸ ಶಂಕ್ರೆಪ್ಪ ಸೋನಾರ ಇವರು ಮಾತನಾಡಿ ಹಲವಾರು ವರ್ಷಗಳಿಂದ ನಮ್ಮ ದೇವಸ್ಥಾನದಲ್ಲಿ ನಡೆದು ಬರುತ್ತಿರುವ ಶ್ರೀದೇವಿಯ ಒಂಬತ್ತು ದಿನಗಳ ವಿಶೇಷ ಪೂಜೆ ಹಾಗೂ ಪುರಾಣ ಪಾರಾಯಣ ಕಾರ್ಯಕ್ರಮವು ಈ ವರ್ಷವೂ ಅತ್ಯಂತ ಭಕ್ತಿ ಭಾವದೊಂದಿಗೆ ಯಶಸ್ವಿಯಾಗಿ ಸಂಪನ್ನವಾಗಿದೆ.
ಇದಕ್ಕಾಗಿ ನಾನು ಸಮಾಜದ ಎಲ್ಲ ಬಾಂಧವರಿಗೆ ಅಭಿನಂದಿಸುತ್ತೇನೆ. ವಿಶೇಷವಾಗಿ 9 ದಿನಗಳ ಕಾಲ ಕುಮಾರ ಶ್ರೀಶೈಲ ಬಡಿಗೇರ ಇವರು ಪುರಾಣ ಪಾರಾಯಣವನ್ನು ಎಲ್ಲರಿಗೂ ಮನಮುಟ್ಟುವಂತೆ ಮಾಡಿದ್ದಾರೆ ಅವರಿಗೆ ಹಾಗೂ ನಮ್ಮ ತಾಯಂದಿರು ಇಂದು 33 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟಿದ್ದಾರೆ ಅವರಿಗೂ ಸಹ ನಾನು ಸಮಾಜದ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 9 ದಿನಗಳ ಕಾಲ ಶ್ರೀದೇವಿ ಪುರಾಣ ಪಾರಾಯಣ ಕಾರ್ಯಕ್ರಮ ನಡೆಸಿಕೊಟ್ಟ ಕುಬೇರ (ಕುಮಾರ) ಬಡಿಗೇರ ಇವರನ್ನು ಕಾಳಿಕಾದೇವಿ ದೇವಸ್ಥಾನ ಕಮಿಟಿ ವತಿಯಿಂದ ಸನ್ಮಾನಿಸಿ ಗೌರವ ಧನ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ಸುನೀಲ ವರದಪ್ಪನವರ, ಯಚರಣ್ಣ ಎಂ.ಪತ್ತಾರ (ತೆಲಗಿ), ಭೀಮಾಶಂಕರ ಪತ್ತಾರ (ಹಂಚಲಿ), ಪ್ರಭು ಹಿಪ್ಪರಗಿ, ನಾಗರಾಜ ಎಂ ಪತ್ತಾರ, ಮುದಕಣ್ಣಾ ಬಡಿಗೇರ, ಗಂಗಪ್ಪ ಬಡಿಗೇರ, ಶ್ರೀನಿವಾಸ ಕೆ ಪತ್ತಾರ, ಉದಯ ಸೋನಾರ, ವಿಶ್ವಕರ್ಮ ಸಮಾಜದ ಬಾಂಧವರು, ಮಹಿಳಾ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜಗನ್ಮಾತೆ ಶ್ರೀದೇವಿಯ ಸರ್ವ ಭಕ್ತರು ಉಪಸ್ಥಿತರಿದ್ದರು.