ತಾಳಿಕೋಟಿ

ಭೀಮಬಾಯಿ ಗೌಡತಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ

ಭೀಮಬಾಯಿ ಗೌಡತಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ


ತಾಳಿಕೋಟಿ 21 :  ದೇಸಿ ಸೊಗಡಿನ ಸೋಬಾನ ಪದ, ಆರತಿ ಪದ, ಬೀಸು ಕಲ್ಲಿನ ಪದ ಹಾಗೂ ತತ್ವಪದಗಳು ಗ್ರಾಮೀಣ ಬದುಕಿನ ಸಿರಿಸಂಪತ್ತಾಗಿವೆ. ಅವುಗಳನ್ನು ಅರ್ಧಶತ ಮಾನಕ್ಕೂ ಹೆಚ್ಚುಕಾಲ ಹಾಡುತ್ತ, ಜನಸಂದಣಿಯ ಮಧ್ಯ ತಮ್ಮ ಅಮೂಲ್ಯವಾದ ಕಂಠಸಂಪತ್ತಿನಲ್ಲಿ ಹಿಡಿದಿಟ್ಟುಕೊಂಡಿರುವ ಹಿರಿಯ ಜೀವ ತಿಳಗೂಳದ ಭೀಮಬಾಯಿ ಗೌಡತಿ ಭೀಮನಗೌಡ ಬಿರಾದಾರ ಅವರು. ತುಂಬು ಎಪ್ಪತ್ತೆರಡು ವರ್ಷಗಳನ್ನು ಪೂರೈಸಿರುವ ಭೀಮಬಾಯಿ ಗೌಡತಿಯವರು ಒಂದು ದಿನವೂ ಶಾಲೆಗೆ ಹೋಗಲಿಲ್ಲ, ಅಕ್ಷರಭ್ಯಾಸ ಆಗಲಿಲ್ಲ. ಆದರೆ ಚಿಕ್ಕವರಿರುವಾಗಲೆ ತಾಯಿಯಿಂದ ಸಾಂಪ್ರದಾಯಿಕ ಹಾಡುಗಳನ್ನು ಹಾಡುವ ಕಲೆಯನ್ನು ಕರಗತ ಮಾಡಿಕೊಂಡರು. ನಂತರ ತತ್ವಪದ ಹಾಡುವುದನ್ನು ಸಾವಿರ ತತ್ವಪದ ಸರದಾರ ಎನಿಸಿದ ತಿಳಗೂಳದ ಯಮನೂರೇಶ ಶರಣ ದಂಪತಿಗಳಿಂದ ಕಲಿತಿರುವೆ ಎಂದು ಮನಬಿಚ್ಚಿ ಮಾತನಾಡುತ್ತಾರೆ. 

ಸುದ್ದಿ ಓದಿ