ತಾಳಿಕೋಟಿ

ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆಯುಧ ಪೂಜೆ

ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆಯುಧ ಪೂಜೆ


ತಾಳಿಕೋಟಿ 21: ಪಟ್ಟಣದ  ಎಸ್‌.ಎಸ್‌.ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಂಗಮೇಶ್ವರ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಸೋಮವಾರದಂದು ಆಯುಧ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಡದೇವಿಯ ಭಾವಚಿತ್ರಕ್ಕೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್‌.ಎಸ್‌.ಪಾಟೀಲರು ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಕಿರಣ ಎಚ್‌. ಪಾಟೀಲ, ಕಾರ್ಯದರ್ಶಿಗಳಾದ ಸಚಿನ ಎಚ್‌.ಪಾಟೀಲ, ಸಂತೋಷ ಎಚ್‌. ಪಾಟೀಲ, ಹಾಗೂ ಪಾಟೀಲರ ಪರಿವಾರ ಸದಸ್ಯರು ಭಾಗವಹಿಸಿದ್ದರು. ಈ ಸಮಯದಲ್ಲಿ ಪ್ರಾಚಾರ್ಯ ಎಸ್‌.ಬಿ.ಸಾಸನೂರ, ಎಸ್‌.ಟಿ.ಗೋನಾಳ, ಎಸ್‌.ಎಸ್‌.ವಿದ್ಯಾಸಂಸ್ಥೆಯ ಸಿಬ್ಬಂದಿಗಳು ಹಾಗೂ ಕೈಗಾರಿಕಾ ತರಭೇತಿ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ