ಬೈಲಹೊಂಗಲ

ಬೇವಿನಕೊಪ್ಪ ಆನಂದ ಆಶ್ರಮದಲ್ಲಿ ಯೋಗ ರತ್ನ ಡಾ. ಸಂತೋಷ ಗುರೂಜಿ ಅವರಿಗೆ ಸನ್ಮಾನ

ಬೇವಿನಕೊಪ್ಪ ಆನಂದ ಆಶ್ರಮದಲ್ಲಿ ಯೋಗ ರತ್ನ ಡಾ. ಸಂತೋಷ ಗುರೂಜಿ ಅವರಿಗೆ ಸನ್ಮಾನ


ಬೈಲಹೊಂಗಲ 21: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ  ಮಲ್ಲಮ್ಮನ ಬೆಳವಡಿ ಗ್ರಾಮದ  ಗಣ್ಯ ಮನೆತನದ ಯೋಗ ಶಿಕ್ಷಕ, ಉಪನ್ಯಾಸಕ, ಸಾಹಿತಿ ಹಾಗೂ ಭಾರತೀಯ ಸಂಸ್ಕೃತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸಂತೋಷ ಶಂಕರೆಪ್ಪ ಯಕ್ಕುಂಡಿ  ಅವರು ಬೆಂಗಳೂರಿನ ರೋಟರಿ ಕ್ಲಬ್ ಹಾಗೂ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ  ಸಂಸ್ಥೆ ಮತ್ತು ಅಮೆರಿಕ ಯೋಗ ಯೂನಿವರ್ಸಿಟಿ ಆಫ್ ಅಮೆರಿಕ ಇವರು ನೀಡುವ ರಾಜ್ಯಮಟ್ಟದ ಯೋಗ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಈ ಪ್ರಯುಕ್ತ ಬೆಂಗಳೂರಿನ ಕೇಂದ್ರ ಬಸವ ಸಮಿತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರು, ಕೇಂದ್ರ ಬಸವ ಸಮಿತಿಯ ಹಿರಿಯ ನಿರ್ದೇಶಕರಾದ ಮೋಹನ ಬಸನಗೌಡ ಪಾಟೀಲ ಅವರು ಬೇವಿನಕೊಪ್ಪ ನಿತ್ಯಾನಂದ ಆನಂದಾಶ್ರಮದಲ್ಲಿ   ಸನ್ಮಾನಿಸಿ, ಅಭಿನಂದಿಸಿ, ಗೌರವಿಸಿದರು.     

 

ಬೇವಿನಕೊಪ್ಪ ನಿತ್ಯಾನಂದ ಆಶ್ರಮದ ಸೇವಾರ್ಥಿ  ಗೋರೆಸಾಬ ನದಾಪ ಅವರು ಮಾತನಾಡಿ, ಡಾ. ಸಂತೋಷ ಗುರೂಜಿಯವರು  ಕಳೆದ 24 ವರ್ಷಗಳಿಂದ ಯೋಗ ಕ್ಷೇತ್ರದಲ್ಲಿ ಸುಮಾರು 20,000ಗಳಿಗಿಂತ ಹೆಚ್ಚಿನ ಜನರಿಗೆ ಯೋಗ ತರಬೇತಿಯನ್ನು ನೀಡಿರುವರು  ಅವರು ಬಾಲ್ಯದಲ್ಲಿ ಕಡು ಬಡತನದ ಕುಟುಂಬದಲ್ಲಿ ಜನಿಸಿದರೂ ಸಹಿತ ಎಂ.ಪಿ. ಕಳಸದ ಇವರ ಮಾರ್ಗದರ್ಶನ ಸಿಕ್ಕಿರುವುದರಿಂದ ತಮ್ಮ ಯೌವ್ವನದ ವಯಸ್ಸಿನಲ್ಲಿ ತಮ್ಮ ಸಂಪೂರ್ಣ ಗಮನವನ್ನು ಶಿಕ್ಷಣದ ಮೇಲೆ ಕೇಂದ್ರೀಕರಿಸಿ ಭಾರತೀಯ ಗ್ರಾಮ ವಿಕಾಸ ಹಾಗೂ ಸ್ಫೂರ್ತಿದಾಯಕ ನಾಯಕತ್ವ ರೂಪಿಸುವ ಮಹಾವಿದ್ಯಾಲಯ ಬಿ.ಎ. ತತ್ಸಮಾನ ಪದವಿಯಲ್ಲಿ ಪ್ರಥಮ ರ್ಯಾಂಕ್, ಎಂ.ಎ. ತತ್ವಶಾಸ್ತ್ರ ಪದವಿಯಲ್ಲಿ ಸುವರ್ಣ ಪದಕ, ಡಿಪ್ಲೋಮಾ ಯೋಗ ಸ್ಟಡೀಸ್ ನಲ್ಲಿ ಡಿಸ್ಟಿಂಕ್ಷನ್,


2026 ರಲ್ಲಿ ಅನುಭಾವಿಗಳಾಗಿ ಶ್ರೀ ಚೆನ್ನಬಸವಣ್ಣನವರು ಮತ್ತು ಸಂತ ಶಿಶುನಾಳ ಶರೀಫರು ಒಂದು ತೌಲನಿಕ ಅಧ್ಯಯನ ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸಲ್ಲಿಸಿ ಪಿಎಚ್‌.ಡಿ ಪದವಿಯನ್ನು ಪಡೆದಿರುವವರಾಗಿರುತ್ತಾರೆ.       ಈ ಸಂದರ್ಭದಲ್ಲಿ ಇವರಿಗೆ ದಕ್ಷಿಣ ಭಾರತ ರಾಜ್ಯಗಳ ಯೋಗ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೀಡಲಾಗುವ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ನಮಗೆಲ್ಲ ಅತೀವ ಸಂತಸವನ್ನು ಉಂಟು ಮಾಡಿದೆ ಎಂದರು. 


ಸುದ್ದಿ ಓದಿ