ದಸರಾ ಹಬ್ಬ ನಮ್ಮೆಲ್ಲರ ಹೆಮ್ಮೆಯ ಹಬ್ಬವಾಗಿದೆ : ವಾಸಣ್ಣ ಕುರಡಗಿ
ಲೋಕದರ್ಶನ ವರದಿ
ಗದಗ 21: ನಾಡಿನಾದ್ಯಾಂತ ಅದ್ದೂರಿಯಾಗಿ ಆಚರಿಸಲಾಗುತ್ತಿರುವ ದಸರಾ ಹಬ್ಬ ನಮ್ಮೆಲ್ಲರ ಹೆಮ್ಮೆಯ ಹಬ್ಬವಾಗಿದೆ ಎಂದು ಗದಗ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಅವರು ಹೇಳಿದರು.
ಅವರು ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರಬಾರ ವೇದಿಕೆಯಲ್ಲಿ ಜರುಗಿದ ನಮ್ಮೂರ ದಸರಾ-2026 ಹಬ್ಬದ ಕಾಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಗದಗ ನಗರದಲ್ಲಿ ಎಸ್.ಎಸ್.ಕೆ ಸಮಾಜದ ವತಿಯಿಂದ ದಸರಾ ಹಬ್ಬವನ್ನು ಅದ್ದೂರಿಯಾಗಿ ಮತ್ತು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಜಿಲ್ಲೆಯಾದ್ಯಾಂತ ಎಸ್ಎಸ್ಕೆ ಸಮಾಜದ ಕುಟುಂಬಗಳನ್ನು ಸಮೀಕ್ಷೆ ಮಾಡಿ ಬಡಕುಟುಂಬದ ಮಕ್ಕಳಿಗೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುವದರ ಮೂಲಕ ಎಸ್ಎಸ್ಕೆ ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದು ಕರೆ ನೀಡಿದರು.
ಪಂಚ ಕಮೀಟಿ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗದಗ ಎಸ್ಎಸ್ಕೆ ಸಮಾಜ ಬಾಂಧವರು ಹಲವಾರು ವರ್ಷಗಳಿಂದ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಅಲ್ಲದೆ, ಗುರುಹಿರಿಯರ ಸಹಕಾರದಿಂದ ಧಾರ್ಮಿಕ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿದಿನ ದಾನಿಗಳಿಂದ ಪ್ರಸಾದ ಸೇವೆ, ಸಾಧಕರಿಗೆ ಮತ್ತು ದಾನಿಗಳಿಗೆ ಸನ್ಮಾನ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾದವು ಎಂದು ಹೇಳಿದರು.
ಎಸ್ಎಸ್ಕೆ ಸಮಾಜದ ಅಧ್ಯಕ್ಷ ಫಕೀರಸಾ ಬಾಂಡಗೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆ ಮೇಲೆ ಅತಿಥಿಗಳಾದ ಹುಬ್ಬಳ್ಳಿಯ ಗಣ್ಯ ಉದ್ಯಮಿ ಬಾಲಚಂದ್ರ ಬಾಂಡಗೆ, ಚಕ್ರವರ್ತಿ ದಿನಪತ್ರಿಕೆಯ ಸಂಪಾದಕರಾದ ಎನ್.ಆರ್. ಬಾಂಡಗೆ, ಉಪ ಸಂಪಾದಕರಾದ ಟಿ.ಎನ್.ಬಾಂಡಗೆ, ಡಾ.ಸೂರಜ ಕಾಟೀಗರ, ಪಂಚ ಕಮೀಟಿ ಉಪಾಧ್ಯಕ್ಷರಾದ ರಾಜು ಬದಿ, ಸಹ ಕಾರ್ಯದರ್ಶಿ ರವಿ ಶಿದ್ಲಿಂಗ, ದಸರಾ ಕಮೀಟಿ ಚೇರಮನ್ ಪ್ರಕಾಶ ಬಾಕಳೆ, ವೈಯಸ್ ಚೇರಮನ್ ಬಲರಾಮ ಬಸವಾ, ಪಂಚ ಕಮೀಟಿ ಸದಸ್ಯರಾದ ಸುರೇಶಕುಮಾರ ಬದಿ,
ಮೋತಿಲಾಲಸಾ ಪೂಜಾರಿ, ಮಾರುತಿ ಪವಾರ, ಅನಿಲ್ ಖಟವಟೆ, ಉದ್ಯಮಿ ಬುಡ್ಡಣ್ಣ ಹಬೀಬ, ಡಾ. ಡಿ.ಎಚ್. ಕಬಾಡಿ, ತರುಣ ಸಂಘದ ವಿಶ್ವನಾಥ ಸೋಳಂಕಿ, ಶ್ರೀಕಾಂತ ಬಾಕಳೆ, ಉಮೇಶ ಹಬೀಬ, ನಾಗರಾಜ ಖೋಡೆ, ಅಶೋಕ ಬೇವಿನಕಟ್ಟಿ, ಮೋಹನ ಪವಾರ, ಮಹಿಳಾ ಮಂಡಳದ ರೇಖಾಬಾಯಿ ಖಟವಟೆ, ಭಾವನಾ ಬಾಂಡಗೆ, ಉಮಾ ಬೇವಿನಕಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿ.ಎನ್. ಹಬೀಬ ನಿರೂಪಿಸಿದರು. ಸ್ನೇಹಲತಾ ಕಬಾಡಿ ವಂದಿಸಿದರು.