ಎಸ್ಎಸ್ಕೆ ಸಮಾಜವು ಒಗ್ಗಟ್ಟು ಮತ್ತು ತಾಳ್ಮೆಯಲ್ಲಿ ಬೇರೆ ಸಮಾಜಕ್ಕೆ ಮಾದರಿಯಾಗಿದೆ : ಶರಣ ಪಾಟೀಲ
ಲೋಕದರ್ಶನ ವರದಿ
ಗದಗ 18 : ಎಸ್.ಎಸ್.ಕೆ.ಸಮಾಜ ಬಾಂಧವರು ಶ್ರಮಜೀವಿಗಳು ಮತ್ತು ಸ್ವಾಭಿಮಾನಿಗಳಾಗಿದ್ದಾರೆ ಎಂದು ಉಸಿರು ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಎನ್ಡಬ್ಲೂ ಕೆಆರ್ಟಿಸಿ ಮಾಜಿ ನಿರ್ದೇಶಕ ಶರಣ ಪಾಟೀಲ ಅವರು ಹೇಳಿದರು.
ಅವರು ನಗರದ ಹಳೇ ಸರಾಫ್ ಬಜಾರದ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರಬಾರ ವೇದಿಕೆಯಲ್ಲಿ ಜರುಗಿದ ನಮ್ಮೂರ ದಸರಾ-2026 ಹಬ್ಬದ ಕಾಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ನಾಡಿನ ದಸರಾ ಹಬ್ಬವು ವಿಶ್ವವಿಖ್ಯಾತವಾಗಿದೆ.
ನಾಡಹಬ್ಬದಲ್ಲಿ ಉತ್ತಮ ಮಳೆ-ಬೆಳೆ ಬಂದು ಎಲ್ಲರಿಗೂ ಸುಖ ಸಮೃದ್ದಿ ಶಾಂತಿ ದೊರೆಯಲಿ ಎಂದು ಜಗನ್ಮಾಥೆಯಲ್ಲಿ ಪ್ರಾರ್ಥಿಸಿದರು.
ಇನ್ನೂರ್ವ ಮುಖ್ಯ ಅತಿಥಿ ರೇಣುಕಾ ಶರಣ ಪಾಟೀಲ ಅವರು ಮಾತನಾಡಿ, ಪ್ರತಿಯೊಂದು ಧಾರ್ಮಿಕ ಕ್ಷೇತ್ರಕ್ಕೆ ಹೋದಾಗ ಪ್ರತಿಯೊಬ್ಬರಿಗೂ ಒಂದೊಂದು ಹೊಸ ಅನುಭವ ಆಗುತ್ತದೆ. ಎಸ್ಎಸ್ಕೆ ಸಮಾಜದವರು ಹಿಂದೂ ಧರ್ಮದ ಸಂಸ್ಕೃತಿಯನ್ನು ಚಾಚು ತಪ್ಪದೆ ಪರಿಪಾಲನೆ ಮಾಡಿ, ಜಗದಂಬಾ ತಾಯಿಯ ಪ್ರೀತಿಗೆ ಪಾತ್ರರಾಗಿದ್ದಾರೆ.
ಈ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ಇರುವದರಿಂದ ಅವರುಗಳು ಮನೆ ಮತ್ತು ಸಮಾಜವನ್ನು ಅಚ್ಚುಕಟ್ಟಾಗಿ ನಡೆಸುತ್ತಾರೆ. ಇದರೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಗದಗ ಶಾಸಕ ಡಾ.ಎಚ್.ಕೆ ಪಾಟೀಲ ಅವರು ಶ್ರೀದೇವಿಯ ದರ್ಶನ ಪಡೆದು ಸರ್ವರಿಗೂ ದಸರಾ ಹಬ್ಬದ ಶುಭಾಷಯ ಕೋರಿದರು. ಎಸ್ಎಸ್ಕೆ ಸಮಾಜದ ಪಂಚ ಕಮೀಟಿ ಅಧ್ಯಕ್ಷ ಪಕೀರಸಾ ಬಾಂಡಗೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆ ಮೇಲೆ ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ, ಸಹಕಾರ್ಯದರ್ಶಿ ರವಿ ಶಿದ್ಲಿಂಗ, ದಸರಾ ಕಮೀಟ ಚೇರಮನ್ ಪ್ರಕಾಶ ಬಾಕಳೆ, ವೈಯಸ್ ಚೇರಮನ್ ಬಲರಾಮ ಬಸವಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಂಚ ಕಮೀಟಿ ಸದಸ್ಯರಾದ ಸುರೇಶಕುಮಾರ ಬದಿ, ವಿಷ್ಣುಸಾ ಶಿದ್ಲಿಂಗ, ವಿಶ್ವನಾಥಸಾ ಖಟವಟೆ, ಶ್ರೀನಿವಾಸ ಬಾಂಡಗೆ, ಅಂಬಾಸಾ ಖಟವಟೆ, ಮೋತಿಲಾಲಸಾ ಪೂಜಾರಿ, ಮಾರುತಿ ಪವಾರ, ಪರಶುರಾಮ ಬದಿ,
ಗಂಗಾಧರ ಹಬೀಬ, ಅನಿಲ್ ಖಟವಟೆ, ತರುಣ ಸಂಘದ ವಿಶ್ವನಾಥ ಸೋಳಂಕಿ, ಶ್ರೀಕಾಂತ ಬಾಕಳೆ, ನಾಗರಾಜ ಖೋಡೆ, ಉಮೇಶ ಹಬೀಬ, ಮಹಿಳಾ ಮಂಡಳದ ಸ್ನೇಹಲತಾ ಕಬಾಡಿ, ಭಾವನಾ ಬಾಂಡಗೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿ.ಎನ್.ಹಬೀಬ ನಿರೂಪಿಸಿದರು. ರೇಖಾ ಖಟವಟೆ ವಂದಿಸಿದರು.