ಬಳ್ಳಾರಿ

ಕವನಗಳು ಕವಿಯ ಅಂತರಂಗದ ಭಾವನೆಯ ಪ್ರತಿಬಿಂಬ ಚೋಳರಾಜ್

ಕವನಗಳು ಕವಿಯ ಅಂತರಂಗದ ಭಾವನೆಯ ಪ್ರತಿಬಿಂಬ ಚೋಳರಾಜ್


ಬಳ್ಳಾರಿ. ಅ. 18 : ಕವಿ ತನ್ನ ಸುತ್ತಮುತ್ತ ನಡೆಯುವ ಎಲ್ಲಾ ಘಟನೆಗಳನ್ನು ಸೂಕ್ಷ್ಮ ದೃಷ್ಟಿಯಿಂದ ಗಮನಿಸುವ ಮೂಲಕ  ಹೊಸ ಕಾವ್ಯ ಸೃಷ್ಟಿಗೆ ಕಾರಣನಾಗುತ್ತಾನೆ  ಎಂದು  ಶರಭೆಶ್ವರ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ  ಚೋಳರಾಜ್ ಅಭಿಪ್ರಾಯಪಟ್ಟರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶರಭೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕವಿಗೊಷ್ಠಿ ಮತ್ತು ಡಾ.ಎಸ್‌ವೀರೇಶ್ ಕುಮಾರ್ ಅವರ ’ಮನವು’ ಎನ್ನುವ ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕವಿಗಳು ಹಾಗೂ ಕಥೆಗಾರರಾದ ವೀರೇಂದ್ರ ರಾವಿಹಾಳ್ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕವನಗಳು  ಕವಿಯ ಸೃಜನಶೀಲ ದೃಷ್ಟಿಯಿಂದ ಹೊರಹೊಮ್ಮುವ ಕಿರಣಗಳು. ಕವಿಗೆಳು ಭಾವತೀವ್ರತೆ ಹಾಯ್ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಕಾವ್ಯ ರಚನೆಗೆ ತೊಡಗಿದಾಗ ಮಾತ್ರ ಉತ್ತಮ ಕವನಗಳು ರಚನೆಯಾಗುತ್ತವೆ ಎಂದು ನುಡಿದರು. ಜಿಂದಾಲ್ ಕಂಪನಿಯ ಇಂಜಿನಿಯರ್ ಡಾ. ಎಸ್‌. ವೀರೇಶ್ ಕುಮಾರ್ ಅವರ ’ಮನವು ’ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

ಕ.ಸಾ.ಪ ಜಿಲ್ಲಾಧ್ಯಕ್ಷ ಡಾ ನಿಷ್ಠಿ ರುದ್ರ​‍್ಪ  ಕವನ ಸಂಕಲನ ಕುರಿತು ಮಾತನಾಡಿದರು.ವೇದಿಕೆಯಲ್ಲಿ ಉಪನ್ಯಾಸಕರಾದ ಶಿವಾನಂದಯ್ಯ, ಶ್ರೀಮತಿ ಪ್ರಿಯಾಂಕಾ ಚೌಧರಿ ಉಪಸ್ಥಿತರಿದ್ದರು.28 ಜನ ವಿದ್ಯಾರ್ಥಿಗಳು ಕವನ ವಾಚನ ಮಾಡಿದರು.ಕು. ಸಹನಾ, ಅಶ್ವಿನಿ ರೂಪಾ ಪ್ರಾರ್ಥಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಸಂದೀಪ್ ಸ್ವಾಗತಿಸಿದರು. ವೆಂಕಟೇಶ್ ವಂದನಾರೆ​‍್ಣ ಸಲ್ಲಿಸಿದರು. 


ಸುದ್ದಿ ಓದಿ