ಹೊನ್ನಳ್ಳಿ ತಾಂಡಾದಲ್ಲಿ ಉದ್ಯೋಗ ಖಾತರಿ ಕಾಮಗಾರಿ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ತ್ರಿಲೋಕ ಚಂದ್ರ ಕೆ.ವಿ
ಬಳ್ಳಾರಿ,ಅ.17: ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನಳ್ಳಿ ತಾಂಡಾಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ತ್ರಿಲೋಕ ಚಂದ್ರ ಕೆ.ವಿ ಅವರು ಶನಿವಾರ ಭೇಟಿ ನೀಡಿ ಉದ್ಯೋಗ ಖಾತರಿ ಕಾಮಗಾರಿ ಪರೀಶೀಲನೆ ನಡೆಸಿದರು.ಹೊನ್ನಳ್ಳಿ ತಾಂಡಾದ ಗುಡ್ಡದ ಬಳಿ ವಿಬಿ ಜಿ-ರಾಮ್ ಜಿ ಯೋಜನೆಯಡಿ ಕೈಗೊಳ್ಳಲಾಗಿರುವ ಟ್ರೆಂಚ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಕೂಲಿಕಾರರ ಕಾರ್ಯವೈಖರಿ, ಕಾಮಗಾರಿಯ ಪ್ರಗತಿ ಮತ್ತು ಯೋಜನೆಯ ಸಮರ್ಕ ಅನುಷ್ಠಾನದ ಕುರಿತು ಪರೀಶೀಲಿಸಿದರು.
ಇದೇ ವೇಳೆ, ಈ ಕಾಮಗಾರಿಯಿಂದ ಪರಿಸರ ಹಾಗೂ ಅಂತರ್ಜಲ ಮಟ್ಟ ವೃದ್ಧಿಗೆ ಆಗುವ ಪ್ರಯೋಜನಗಳ ಬಗ್ಗೆ ಸ್ಥಳದಲ್ಲಿದ್ದ ಕೂಲಿಕಾರರಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ , ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಬಳ್ಳಾರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಬಾರಕೇರ್,
ಗ್ರಾಮೀಣ ಉದ್ಯೋಗ ಯೋಜನೆಯ ಸಹಾಯಕ ನಿರ್ದೇಶಕ ಆರ್.ಕೆ. ಬಸವರಾಜ್, ಟಿಐಇಸಿ ರಮೇಶ್, ತಾಂತ್ರಿಕ ಸಂಯೋಜಕ ವಿಜಯ ಮಹಾಂತೇಶ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶಾಷವಲಿ ಸೇರಿದಂತೆ ಗ್ರಾಮ ಪಂಚಾಯತಿ ಕಾರ್ಯದರ್ಶಿ, ಕರವಸೂಲಿಗಾರರು, ಟಿಎಇ, ಬಿಎಫ್ಟಿ, ಟಿಆರ್ಎಂ ಮತ್ತು ಸಿಬ್ಬಂದಿಗಳು, ಕೂಲಿಕಾರರು ಉಪಸ್ಥಿತರಿದ್ದರು.