ಅವೈಜ್ಞಾನಿಕ ಪದ್ಧತಿಯ ಎಸ್ ಐ ಆರ್ ಅನ್ನು ರದ್ದುಗೊಳಿಸಿ : ಎ ಮಾನಯ್ಯ ಆಗ್ರಹ
ಬಳ್ಳಾರಿ. ಅ. 16 : ಕಳೆದ ಎರಡು ತಿಂಗಳ ಹಿಂದೆ ನಡೆದ ಎಸ್ಐಆರ್ ಪ್ರಕ್ರಿಯೆ ಮತದಾನದ ಹಕ್ಕು 1965ರ ಕಾಯ್ದೆಯ ಪ್ರಕಾರ ನಡೆದಿರುವುದಿಲ್ಲ ಇದನ್ನು ರದ್ದುಪಡಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿಜಿ ಸಾಗರ್ ಬಣದ ರಾಜ್ಯ ಸಂಘಟನಾ ಸಂಚಾಲಕರಾದ ಎ ಮಾನಯ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು .
ರಾಜ್ಯದಾದ್ಯಂತ ಇಂದು ಡಿಎಸ್ಎಸ್ ಡಿಜೆ ಸಾಗರ್ ಬಣದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಅದೇ ಪ್ರಕಾರ ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿಜಿ ಸಾಗರ್ ಬಣದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ, ಈಗ ನಡೆಸಲಯಾದ ಎಸ್ಐಆರ್ ಸಾಕಷ್ಟು ಲೋಪ ದೋಷಗಳಿಂದ ಕೂಡಿದೆ.
ಇದು ಜ್ಞಾನೇಶ್ ಕುಮಾರ್ ಅವರ ಏಕ ಪಕ್ಷಿಯ ನಿರ್ಧಾರವಾಗಿದೆ ಉಳಿದ ಇಬ್ಬರು ಚುನಾವಣಾ ಆಯುಕ್ತರ ಗಮನಕ್ಕೆ ತರದೆ ಫಾರ್ಮ್ ನಂಬರ್ 6 ಬದಲಾವಣೆ ಮಾಡಿ ತಿದ್ದುಪಡಿಗಳನ್ನು ತಂದಿದ್ದಾರೆ ಇದು ಸಹ ಅವೈಜ್ಞಾನಿಕ ಕ್ರಮವಾಗಿದ್ದು ಇದನ್ನು ಸಹ ರದ್ದು ಮಾಡಬೇಕು ಮತ್ತು ದೇಶದ ಮತದಾರರ ಹೆಸರುಗಳನ್ನು ಕಾನೂನುಬಾಹಿರವಾಗಿ ರದ್ದುಗೊಳಿಸಿದ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ಕೇಂದ್ರ ಚುನಾವಣಾ ಆಯೋಗದಿಂದ ವಜಾ ಗೊಳಿಸಬೇಕೆಂದು ಆಗ್ರಹಿಸಿದರು.
ದೇಶದಲ್ಲಿ ಇತ್ತೀಚೆಗೆ ನಡೆಸಲಾದ ಎಸ್ಐಆರ್ ಪ್ರಕ್ರಿಯೆಯಿಂದ ದೇಶದ ಸುಮಾರು 13 ಕೋಟಿಗಿಂತಲೂ ಹೆಚ್ಚು ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗಿದೆ ಇಂತಹ ಕ್ರಮಕ್ಕೆ ಮುಂದಾದ ಜ್ಞಾನೇಶ್ ಕುಮಾರ್ ಅವರ ಮೇಲೆ ಕ್ರಿಮಿನಲ್ ಮುಖದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದ ಅವರು, ಇವರ ಈ ರೀತಿಯ ಕ್ರಮವನ್ನು ಖಂಡಿಸಿ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಹಲವಾರು ಅರ್ಜಿಗಳು ದಾಖಲಿಸಲಾಗಿದೆ ಕೂಡಲೇ ಅವರನ್ನು ಚುನಾವಣಾ ಆಯುಕ್ತ ಸ್ಥಾನದಿಂದ ವಜಾ ಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿದರು.
ಈ ಪ್ರತಿಭಟನಾ ಧರಣಿಯಲ್ಲಿ ಚಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಸಿ ನರಸಪ್ಪ ಜಿಲ್ಲಾ ಸಂಚಾಲಕ ಗಂಗಪ್ಪ ದೇವದಾಸ್ ಕೆ ಎಚ್ ಆಂಜನೇಯ ಬಿ ರಮೇಶ್ ತಳವಾರ ದುರ್ಗಪ್ಪ ಎರ್ರಿಸ್ವಾಮಿ ಶಂಕರ್ ಸಿದ್ದೇಶ್ ಕಂಪ್ಲಿ ಕುಮಾರ್ ಕುರುಗೋಡು ಬಸವರಾಜ್ ಎತ್ತಿನ ಬೂದಿಹಾಳ ಶಿವಕುಮಾರ್, ದೊಡ್ಡಬಸಪ್ಪ ಭೀಮೇಶ್ ವೀರೇಶ್ ಜಗದೀಶ್ ರಾಮಯ್ಯ ಆಂಜನೇಯ ಸಂಗನಕಲ್ ವಿಜಯ್ ಕುಮಾರ್ ಗಂಗಾಧರ ಚಳ್ಳೆಗುರ್ಕಿ,ಶುಂಡಿ ರಮೇಶ್ ಇಬ್ರಾಹಿಂಪುರ ಹಿರಿ ಸ್ವಾಮಿ ಜೋಳದರಾಶಿ ಏರಿಸ್ವಾಮಿ ಸೇರಿದಂತೆ ಹಲವಾರು ಜನ ಡಿಎಸ್ಎಸ್ ಕಾರ್ಯಕರ್ತರು ಇದ್ದರು.