ಕಬ್ಬು ಬೆಳೆಗಾರರ ಹೋರಾಟಕ್ಕೆ ಹುಕ್ಕೇರಿ ವಕೀಲರ ಸಂಘ ಬೆಂಬಲ
ಲೋಕದರ್ಶನ ವರದಿ
ಹುಕ್ಕೇರಿ 16: ಕಬ್ಬಿನದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿರೈತರು ನಡೆಸುತ್ತಿರುವ ನಿರಂತರ ಹೋರಾಟಕ್ಕೆ ಹುಕ್ಕೇರಿ ವಕೀಲರ ಸಂಘ ಬೆಂಬಲ ವ್ಯಕ್ತಪಡಿಸಿದೆ.
ಶುಕ್ರವಾರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ರೈತರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿ ಸಂಘದಅಧ್ಯಕ್ಷಡಿ.ಕೆ. ಅವರಗೋಳ ಅವರು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಅರ್ಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲ ಭೀಮಸೇನ ಬಾಗಿ ಮಾತನಾಡಿ, ರೈತರುಕಬ್ಬು ಬೆಳೆಯಲು ಹಗಲು-ರಾತ್ರಿ ಶ್ರಮಿಸುತ್ತಾರೆ.ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ, ಕೂಲಿ ವೆಚ್ಚ ವಿಪರೀತಏರಿಕೆಯಾಗಿದೆ.ಆದರೆಅವರ ಬೆವರಿಗೆತಕ್ಕ ಪ್ರತಿಫಲ ಸಿಗುತ್ತಿಲ್ಲ. ಕಾರ್ಖಾನೆಗಳು ಕಡಿಮೆದರ ನೀಡಿರೈತರನ್ನು ಶೋಷಿಸುತ್ತಿವೆಎಂದರು.ರೈತರ ಬೇಡಿಕೆಗಳು ಸಂಪೂರ್ಣ ನ್ಯಾಯಸಮ್ಮತವಾಗಿವೆ. ಸರ್ಕಾರಕೂಡಲೇ ವೈಜ್ಞಾನಿಕವಾಗಿಎಂ.ಎಸ್.ಪಿ ಮತ್ತುಎಫ್.ಆರ್.ಪಿ ದರವನ್ನು ನಿಗದಿ ಮಾಡಬೇಕು.ಕಬ್ಬುಕಟಾವು ಮಾಡಿದ 14 ದಿನದೊಳಗೆ ರೈತರಖಾತೆಗೆ ಹಣಜಮಾ ಮಾಡಲು ಕಾರ್ಖಾನೆಗಳಿಗೆ ಕಟ್ಟುನಿಟ್ಟಿನಆದೇಶ ನೀಡಬೇಕುಎಂದು ಒತ್ತಾಯಿಸಿದರು.
ರೈತರುದೇಶದ ಬೆನ್ನೆಲುಬು. ರೈತರು ನೆಮ್ಮದಿಯಾಗಿದ್ದರೆ ಮಾತ್ರದೇಶದಆರ್ಥಿಕತೆ ಬಲಿಷ್ಠವಾಗಲು ಸಾಧ್ಯ. ಕಬ್ಬು ಬೆಳೆಗಾರರ ಸಂಕಷ್ಟವನ್ನು ಸರ್ಕಾರಗಂಭೀರವಾಗಿ ಪರಿಗಣಿಸಬೇಕು.ಕೇವಲ ಭರವಸೆ ನೀಡುವುದಲ್ಲದೇ, ಪ್ರಾಯೋಗಿಕವಾಗಿರೈತರ ಪರ ನಿರ್ಧಾರ ಕೈಗೊಳ್ಳಬೇಕು.ಕಬ್ಬು ಸಾಗಣೆಕಟಾವು ವೆಚ್ಚವನ್ನೂ ಸರ್ಕಾರವೇ ಭರಿಸಬೇಕುಎಂದು ವಕೀಲರ ಸಂಘ ಆಗ್ರಹಿಸಿದೆ.
ಪ್ರತಿಭಟನೆಯಲ್ಲಿಉಪಾಧ್ಯಕ್ಷ ಶಿವಾನಂದ ಮರಿನಾಯಿಕ, ಕಾರ್ಯದರ್ಶಿ ಸಂಜೀವಕುಮಾರ ಮಗದುಮ್ಮ, ಸಹ ಕಾರ್ಯದರ್ಶಿ ಶಾಂತಿನಾಥ ಮಲ್ಲಾಪುರೆ, ಖಜಾಂಚಿ ಶಾಂತಲಾ ಶೀಲಯ್ಯನವರಮಠ, ಮಹಿಳಾ ಪ್ರತಿನಿಧಿ ಶೋಭಾ ಮಗದುಮ್ಮ ಸೇರಿದಂತೆ ಹಿರಿಯ, ಕಿರಿಯ ಮತ್ತು ಮಹಿಳಾ ವಕೀಲರು ಉಪಸ್ಥಿತರಿದ್ದರು.