ಕಾರ್ಖಾನೆ ಹೊಗೆ, ಮಲಿನ ನೀರಿನಿಂದ ಬೆಳೆಗಳಿಗೆ ಹಾನಿ
ಪಾಲಬಾವಿ 16 : ಸಮೀರವಾಡಿ ಗೋದಾವರಿ ಬಯೋ ರಿಪೈಜನರಿ ಸಕ್ಕರೆ ಕಾರ್ಖಾನೆಯ ಬಜಾಜ್ ಮೊಲಾಸಿಸ್ (ಮಳ್ಳಿನೀರು) ನಿಂದ ಬೆಳೆಗಳಿಗೆ ರೋಗ ತಗಲಿ ಇಳುವರಿ ಕಡಿಮೆಯಾಗುತ್ತಿದ್ದು, ಈ ಜಮೀನುನಲ್ಲಿ ಕೊರೆಸುವ ಕೊಳವೆ ಬಾವಿಗಳಿಗೆ ಮೊಲೆಸಿಸ್ ನೀರು ಬರುವುದರಿಂದ ಕೊಳವೆಬಾವಿ ಮುಚ್ಚಿದ್ದೇವೆ. ನಮ್ಮ ಇನ್ನೊಂದು ಜಮೀನಿನಲ್ಲಿ ಕೊಳವೆ ಬಾವಿಯಿಂದ 5 ಸಾವಿರ ಫುಟ್ ದೂರದಿಂದ ನೀರು ತಂದು ಬೆಳೆಗಳಿಗೆ ಉಣಿಸುತ್ತೇವೆ.
ಎಂದು ಹಂದಿಗುಂದ ಗ್ರಾಮದ ಹಾಲಪ್ಪ ಲಕ್ಷ್ಮಣ ಪೂಜೇರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅವರು ಇತ್ತೀಚಿಗೆ ಹಂದಿಗುಂದ ಗ್ರಾಮದ ಸರ್ವೇ ನಂಬರ್ 56/2, 30ಗುಂಟೆ ಹಾಗೂ ಸರ್ವೆ ನಂಬರ್ 75/4 ರಲ್ಲಿ 1ಎಕರೆ ಜಮೀನು ಹೊಂದಿದ್ದು ಆ ಜಮೀನುದಲ್ಲಿ ಈಗಾಗಲೇ ಕಬ್ಬು ಇದೇ. ಆ ಜಮೀನದಲ್ಲಿ ಬೆಳೆಯುವ ಕಬ್ಬಿನ ಇಳುವರಿ ತುಂಬಾ ಕಡಿಮೆಯಾಗುತ್ತಿದೆ.
ಕಾರಣ ಇಷ್ಟೇ ಸಕ್ಕರೆ ಕಾರ್ಖಾನೆಯ ಪಕ್ಕದಲ್ಲಿ ಜಮೀನು ಇರುವುದರಿಂದ ಬೆಳೆಗಳ ಇಳುವರಿ ಬರುತ್ತಿಲ್ಲ. ಕಾರಣ ಇಷ್ಟೇ ಕಾರ್ಖಾನೆಯಿಂದ ಉಗುಳುವ ಹೊಗೆಯಿಂದ ಹಾಗೂ ಬಗ್ಯಾಜ್ ನಿಂದ ಬೆಳೆಗಳ ಎಲೆಯ ಮೇಲೆ ಬಿದ್ದು ಅಲ್ಲಿ ಹುಳುಗಳು ತಯಾರಾಗಿ ಬೆಳೆಯ ಇಳುವರಿ ಕಡಿಮೆಯಾಗುತ್ತಿದೆ ಎಂದು ದೂರಿದರು. ಈ ಸಂದರ್ಭದಲ್ಲಿ ಹಾಲಪ್ಪ ಪೂಜೇರಿ, ಶ್ರೀಮಂತ ಪೂಜೇರಿ, ಆನಂದ ಪೂಜೇರಿ ಇತರಿದ್ದರು.