ಬಳ್ಳಾರಿ

ದಸರಾ ಪ್ರಯುಕ್ತ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ

ದಸರಾ ಪ್ರಯುಕ್ತ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ


ಕೂಡ್ಲಿಗಿ : ದಸರಾ ಪ್ರಯುಕ್ತ ಶ್ರೀದೇವಿ ಪುರಾಣ ಪ್ರವಚನ- ವಿಜಯನಗರ ಜಿಲ್ಲೆ ಕೂಡ್ಲಿಗಿ  ಪುರದೇವಿ ಶ್ರೀಊರಮ್ಮ ದೇವಿಯ ದೇವಸ್ಥಾನದಲ್ಲಿ ಶ್ರೀ ಊರಮ್ಮದೇವಿ ಸೇವಾ ಸಮಿತಿ ಹಾಗೂ ಆಯಗಾರರು ಮತ್ತು ಸಮಸ್ತ ದೈವಸ್ಥರ ಸಹಯೋಗದಲ್ಲಿ. ನವರಾತ್ರಿ ಉತ್ಸವ ಹಾಗೂ ದಸರಾ ಹಬ್ಬದ ಪ್ರಯುಕ್ತ ನಿತ್ಯ ರಾತ್ರಿ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಶ್ರವಣ ಕಾರ್ಯಕ್ರಮ ಆಯೋಜಿಸಲಾಗಿದೆ.  

ದಸರಾ ಅಮವಾಸ್ಯೆಯ ಮರುದಿನದಿಂದ ಜಂಗಮಹಿರಿಯರಾದ ಕೂಡ್ಲಿಗಿ ಹಿರೇಮಠದ ಚಿದಾನಂದಯ್ಯರವರ ನೇತೃತ್ವದಲ್ಲಿ ಆರಂಭಗೊಂಡ ನಿತ್ಯ ರಾತ್ರಿ ನಡೆಯಲಿರುವ ಪುರಾಣ ಪ್ರವಚನ ಕಾರ್ಯಕ್ರಮ, ಧಾರ್ಮಿಕ ವಿಧಿವಿಧಾನಗಳೊಂದಿಗೆ  ಆಧ್ಯಾತ್ಮ ಶ್ರದ್ಧಾ ಭಕ್ತಿಯಿಂದ ಜರುಗುತ್ತಲಿದೆ. ಪ್ರವಚನಕಾರರು ಹಾಗೂ ಅರ್ಚಕರಾದ ಬಡಿಗೇರ ನಾಗರಾಜ ಆಚಾರಿ, ಪ್ರವಚನಕಾರರು ಸಂಗೀತ ಕಲಾವಿದರಾದ ಅಗಸಕಟ್ಟೆ ತಿಂದಪ್ಪರವರ ಸಹಭಾಗಿತ್ವದಲ್ಲಿ ವಿವಿಧ ವಾದ್ಯವೃಂಧಗಳನ್ನೊಳಗೊಂಡ ಕಲಾವಿದರ ಸಹಯೋಗದಲ್ಲಿ ಶ್ರದ್ಧಾ ಭಕ್ತಿಯಿಂದ ಪುರಾಣ ಪ್ರವಚನ ಕಾರ್ಯಕ್ರಮ ಜರುಗುತ್ತಲಿದೆ. ಪಟ್ಟಣದ ನಾಗರೀಕರು ಮಹಿಳೆಯರು, ಆಸ್ಥಿಕರು ಮುತ್ತೈದೆಯರು ಪ್ರವಚನ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗಿಯಾಗಿ ಪುರಾಣವನ್ನು ಬಹು ಶ್ರದ್ಧೆಯಿಂದ ಶ್ರವಣ ಮಾಡಿದರು.  

ಈ ಪ್ರವಚನ ಶ್ರವಣ ಕಾರ್ಯಕ್ರಮ ಭಾಗಿಯಾಗಿದ್ದ ನೂರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಗ್ರಾಮದೇವತೆ ಭಕ್ತರು ವ್ಯವಸ್ಥೆ ಮಾಡಿದ್ದರು. ಮುತ್ತೈದೆಯರು ಮಹಿಳೆಯರು ಹೆಣ್ಣು ಮಕ್ಕಳು ಪ್ರತಿದಿನವೂ ಬೆಳ್ಳಂಬೆಳಿಗ್ಗೆ ಮಡಿಮುಡಿಯೊಂದಿಗೆ, ಶಮೀವೃಕ್ಷದ ಬಳಿ ತೆರಳಿ ಶ್ರದ್ಧಾ ಭಕ್ತಿಯಿಂದ ಶ್ರೀಬನ್ನಿಮಹಾಂಕಾಳಿಯನ್ನು ಪೂಜೆಗೈಯ್ಯುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು. 


ಸುದ್ದಿ ಓದಿ