ತಳವಾರ್ ಭೀಮಲಿಂಗ ರೂಪನಗುಡಿ ಝೆಡ್ ಪಿ ಕ್ಷೇತ್ರದ ಕಾಂಗ್ರೆಸ್ ನ ಪ್ರಭಲ ಆಕಾಂಕ್ಷಿ
ಲೋಕದರ್ಶನ ವರದಿ
ಬಳ್ಳಾರಿ. ಅ. 16 : ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಿರಿಯ ಕಾರ್ಯಕರ್ತರಾದ ಗಡಿ ಭಾಗದ ಚೆಳ್ಳಗುರ್ಕಿ ತಳವಾರ್ ಭೀಮಲಿಂಗ ರೂಪನಗುಡಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಪ್ರಭಲ ಆಕಾಂಕ್ಷಿಯಾಗಿದ್ದಾರೆ. ತಳವಾರ್ ಭೀಮಲಿಂಗ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಕಷ್ಟಕಾಲದಲ್ಲಿ ಪಕ್ಷ ಬಿಡದೆ ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಕೆಲಸ ಮಾಡಿದ್ದಾರೆ ಮತ್ತು ಲೋಕಸಭಾ ವಿಧಾನಸಭಾ ಹಾಗೂ ಸ್ಥಳೀಯ ಚುನಾವಣೆ ಸೇರಿದಂತೆ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ.
ಎಲ್ಲಾ ಸಮುದಾಯಗಳ ದೀನದಲಿತರ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಜನರೊಂದಿಗೆ ಅತ್ಯಂತ ವಿಶ್ವಾಸ ಹೊಂದಿದ್ದು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮನೆ ಮನೆಗೆ ತಲುಪಿಸಿದ್ದಾರೆ. ಜನಪರ ಕೆಲಸಗಳು ಹಾಗೂ ಸಂಘಟನೆಗಳ ಮೂಲಕ ಹೋರಾಟ ಮಾಡುತ್ತಾ ಯಾವುದೇ ಜಾತಿ ಭೇದಭಾವ ಮಾಡದೆ ಎಲ್ಲರನ್ನೂ ಒಗ್ಗುಡಿಸಿಕೊಂಡು ಹೋಗುವ ಗುಣವುಳ್ಳ ವ್ಯಕ್ತಿಯಾಗಿದ್ದಾರೆ.ಚೆಳ್ಳಗುರ್ಕಿ ತಳವಾರ್ ಬಿ ಭೀಮ ಲಿಂಗ ಅವರಿಗೆ ಕಾಂಗ್ರೆಸ್ ಪಕ್ಷದಿಂದ ರೂಪನಗುಡಿ ಜಿಲ್ಲಾ ಪಂಚಾಯತ್ ಕ್ಷೆತ್ರಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಿ ಫಾರ್ಮ್ ನೀಡಿ ಅವಕಾಶ ನೀಡಬೇಕೆಂದು ಕ್ಷೇತ್ರದ ಮತದಾರರ ಮನವಿ ಯಾಗಿದೆ.