ಗದಗ

ದಸರಾ ಸಂಭ್ರಮದಲ್ಲಿ ಗ್ರಾಮೀಣ ಸೊಗಡಿನ ಅನಾವರಣ: ‘ದಾರೀದೀಪ’ ಸಂಸ್ಥೆಯಿಂದ ರಂಗೋಲಿ, ಅಡುಗೆ ಸ್ಪರ್ಧೆ

ದಸರಾ ಸಂಭ್ರಮದಲ್ಲಿ ಗ್ರಾಮೀಣ ಸೊಗಡಿನ ಅನಾವರಣ: ‘ದಾರೀದೀಪ’ ಸಂಸ್ಥೆಯಿಂದ ರಂಗೋಲಿ, ಅಡುಗೆ ಸ್ಪರ್ಧೆ
Showcasing Rural Charm Amidst Dasara Festivities: Rangoli and Cooking Competitions Organized by the

ಗದಗ 16: ಕಲೆ, ಸಂಸ್ಕೃತಿ ಮತ್ತು ಬಾಂಧವ್ಯದ ಪ್ರತೀಕವಾದ ವಿಜಯದಶಮಿ ಹಬ್ಬದ ಅಂಗವಾಗಿ, ಇಲ್ಲಿನ ಸಿದ್ದಲಿಂಗ ನಗರದ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನದ ಆವರಣದಲ್ಲಿ ದಾರೀದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ವತಿಯಿಂದ ‘ನಮ್ಮೂರ ದಸರಾ ಉತ್ಸವ’ ಪ್ರಯುಕ್ತ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ರಂಗೋಲಿ ಹಾಗೂ ಸಾಂಪ್ರದಾಯಿಕ ಅಡುಗೆ ಸ್ಪರ್ಧೆಯು ಅತ್ಯಂತ ಸಡಗರ ಮತ್ತು ಯಶಸ್ವಿಯಾಗಿ ಜರುಗಿತು.     


ಆಧುನಿಕತೆಯ ಜಂಜಾಟದ ನಡುವೆ ಮಾಸಿಹೋಗುತ್ತಿರುವ ನಮ್ಮ ಗ್ರಾಮೀಣ ಸೊಗಡಿನ ಕಲೆ ಮತ್ತು ಪಾಕಪದ್ಧತಿಯನ್ನು ಮುಂಚೂಣಿಗೆ ತರುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಸಿದ್ದಲಿಂಗ ನಗರದ 40ಕ್ಕೂ ಹೆಚ್ಚು ಮಹಿಳೆಯರು ಶ್ರದ್ಧೆ ಹಾಗೂ ಉತ್ಸಾಹದಿಂದ ಭಾಗವಹಿಸಿದ್ದರು. ಅಂಗಳದಲ್ಲಿ ಬಿಡಿಸಿದ ಚಿತ್ತಾರಗಳು ಕಣ್ಮನ ಸೆಳೆದರೆ, ಮತ್ತೊಂದೆಡೆ ಹಬ್ಬದ ವಿಶೇಷ ಸಾಂಪ್ರದಾಯಿಕ ಖಾದ್ಯಗಳು ದಸರಾ ಸಂಭ್ರಮಕ್ಕೆ ಮರುಜೀವ ನೀಡಿದಂತಿದ್ದವು.   


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾರೀದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷರಾದ ಶಕುಂತಲಾ ಮುಳಗುಂದ ಮಾತನಾಡಿ, ಹಬ್ಬಗಳು ಕೇವಲ ಆಚರಣೆಯಷ್ಟೇ ಅಲ್ಲ, ಅವು ನಮ್ಮ ಒಗ್ಗಟ್ಟು ಮತ್ತು ಸೃಜನಶೀಲತೆಯ ಪ್ರತಿಬಿಂಬ. ಮಹಿಳೆಯರಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವುದು ಮತ್ತು ನಮ್ಮ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವುದು ದಾರೀದೀಪ ಸಂಸ್ಥೆಯ ಮುಖ್ಯ ಆಶಯವಾಗಿದೆ. ಇಂತಹ ಹಬ್ಬದ ಸಡಗರಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ, ಎಂದು ಮಾರ್ಮಿಕವಾಗಿ ನುಡಿದರು.   


ಸುದ್ದಿ ಓದಿ