ಗದಗ

ಮೆಣಸಿನಕಾಯಿ ಬೆಳೆ ವಿಮೆ ಬರಗಾಲ ಪರಿಹಾರ ಜಮಾಡುವಂತೆ ರೈತರ ಪ್ರತಿಭಟನೆ ಮನವಿ

ಮೆಣಸಿನಕಾಯಿ ಬೆಳೆ ವಿಮೆ ಬರಗಾಲ ಪರಿಹಾರ ಜಮಾಡುವಂತೆ ರೈತರ ಪ್ರತಿಭಟನೆ ಮನವಿ
Farmers protest and submit a memorandum seeking the disbursement of chili crop insurance and drought


 ಲಕ್ಷ್ಮೇಶ್ವರ  16: ಪಟ್ಟಣದಲ್ಲಿ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಅನ್ನದಾತರು ಪಟ್ಟಣದ ಶಿಗ್ಲಿ ನಾಕರಿಂದ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕಾಲ್ನಡಿಗೆಯ ಮೂಲಕ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ತಹಶೀಲ್ದಾರ್ ಕಚೇರಿಗೆ ತೆರಳಿ 2025 26ನೇ ಸಾಲಿನ ಮುಂಗಾರು ಹಂತದ ಬೆಳೆಯಾದ ಮೆಣಸಿನಕಾಯಿ ಬೆಳೆದ ಬೆಳೆಗಾರರಿಗೆ ವಿಮಾ ಹಣವನ್ನು ಮತ್ತು ರಾಜ್ಯದಲ್ಲಿ ಬರಗಾಲದಿಂದ ರೈತರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದು ಸರಕಾರ ಒಂದು ವಾರದೊಳಗೆ ರೈತರ ಖಾತೆಗೆ ಹಣ ಜಮೆ ಮಾಡಬೇಕು ಇಲ್ಲದಿದ್ದರೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಉಗ್ರ ಪ್ರತಿಭಟನೆ ಕೈ ಗೊಳ್ಳಬೇಕಾಗುತ್ತದೆ ಎಂದುಉಪ ತಹಸಿಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದರುಮನವಿ ಸಲ್ಲಿಸಿ ಮಾತನಾಡಿದ ರೈತ ಮುಖಂಡ ಚನ್ನಪ್ಪ ಷಣ್ಮುಖಿ ಅವರು ತಾಲೂಕಿನಲ್ಲಿ ರೈತರು 2025 26 ನೇ ಮುಂಗಾರು ಹಂತದ ತೋಟಗಾರಿಕೆ ಬೆಳೆಯಾದ ಮೆಣಸಿನಕಾಯಿ ಬೆಳೆ ವಿಮಾ ತುಂಬಿದ್ದಾರೆ. 


ಸುದ್ದಿ ಓದಿ