ಗದಗ

ಮುದ್ರಣ ಮತ್ತು ಪುಸ್ತಕ ಪ್ರಕಾಶನ ಕ್ಷೇತ್ರದ ಸಾಧಕರಿಗೆ ಗೌರವ

ಮುದ್ರಣ ಮತ್ತು ಪುಸ್ತಕ ಪ್ರಕಾಶನ ಕ್ಷೇತ್ರದ ಸಾಧಕರಿಗೆ ಗೌರವ

ಲೋಕದರ್ಶನ ವರದಿ 


ಗದಗ 19 : ಮುದ್ರಣ ಮತ್ತು ಪುಸ್ತಕ ಪ್ರಕಾಶನದಲ್ಲಿ ಅಪರೂಪದ ಸಾಧನೆ ಮಾಡಿ ಕೈಗಾರಿಕಾ ಇಲಾಖೆಯಿಂದ ಹಾಗೂ ವಿವಿಧ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕೃತರಾದ ಮುದ್ರಣೋದ್ಯಮಿಗಳು, ಪುಸ್ತಕೋದ್ಯಮಿಗಳಾದ ಪಾರ್ವತಿ ಶಾಬಾದಿಮಠ ಅವರನ್ನು ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ಜಾತ್ರಾ ಮಹೋತ್ಸವ, ಶ್ರೀಮಠದ ಶಿವಾನುಭವ ಸಮಿತಿ ಹಾಗೂ ಶ್ರೀಮಠದಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ, ಉದ್ದಿಮೆದಾರರಾದ ಎಸ್‌.ಪಿ. ಸಂಶಿಮಠ, ಚಂದ್ರು ಬಾಳಿಹಳ್ಳಿಮಠ, ಜಾತ್ರಾಮಹೋತ್ಸವ ಸಮಿತಿ ಗೌರವಾಧ್ಯಕ್ಷ ಸದಾಶಿವಯ್ಯ ಮದರಿಮಠ, ಅಧ್ಯಕ್ಷ ಸಂತೋಷ ಮಹೇಶಚಂದ್ರ ಕಬಾಡರ, ಮಹಿಳಾ ಅಧ್ಯಕ್ಷರಾದ ಶಿವಲೀಲಾ ಅಕ್ಕಿ, ಶಿವಾನುಭವ ಸಮಿತಿ ಅಧ್ಯಕ್ಷ ಡಾ.ರಾಜೇಂದ್ರ ಗಡಾದ, ವಿಜಯಲಕ್ಷ್ಮೀ ಹೊಸಳ್ಳಿಮಠ ಇತರರಿದ್ದಾರೆ. 


ಸುದ್ದಿ ಓದಿ