ಮೃತ ವ್ಯಕ್ತಿಯ ಮನೆಗೆ ಶಾಸಕ ನಾಡಗೌಡ ಭೇಟಿ; ಸಾಂತ್ವನ
ತಾಳಿಕೋಟಿ 21 : ಪಟ್ಟಣದ ಮುಸ್ಲಿಂ ಸಮಾಜದ ಕ್ರಿಯಾಶೀಲ ಮುಖಂಡರು ಹಾಗೂ ನ್ಯಾಯವಾದಿಗಳಾದ ಎನ್ ಎಸ್ ಬಡಗಣ ಅವರು ಇತ್ತೀಚಿಗೆ ನಿಧನರಾದ ಹಿನ್ನೆಲೆಯಲ್ಲಿ ಅವರ ಮನೆಗೆ ಶಾಸಕ ಅಪ್ಪಾಜಿ ನಾಡಗೌಡರು ಸೋಮವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಶಾಸಕರು ಎನ್ಎಸ್ ಬಡಗಣ ಅವರ ಕುರಿತು ಮಾತನಾಡಿ ಅವರೊಬ್ಬ ಅತ್ಯಂತ ಸರಳ ವ್ಯಕ್ತಿತ್ವ, ಮೃದು ಸ್ವಭಾವದ ಸ್ನೇಹಪರ ವ್ಯಕ್ತಿಗಳಾಗಿದ್ದರು. ಅನಾರೋಗ್ಯದಿಂದಾಗಿ ಅವರು ನಮ್ಮನ್ನು ಅಗಲಿದ್ದಾರೆ ಇಷ್ಟು ಬೇಗ ಅವರು ನಮ್ಮಿಂದ ದೂರ ವಾಗಬಾರದಿತ್ತು ಆದರೆ ಇದು ವಿಧಿ ಲಿಖಿತ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿ ನಾನು ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ, ಭಗವಂತ ಅವರ ಕುಟುಂಬದ ಸದಸ್ಯರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಬಡಗಣ ಕುಟುಂಬದ ಸದಸ್ಯರಾದ ರಿಯಾಜ ಬಡಗಣ, ರಿಹಾನ ಮಲಿಕ್ ಬಡಗಣ, ಟಿಪ್ಪು ಸುಲ್ತಾನ್ ಬಡಗಣ, ಅಬ್ದುಲ್ ಜಬ್ಬಾರ ಬಡಗಣ, ಬೇಪಾರಿ ಜಮಾತ್ ಅಧ್ಯಕ್ಷ ಮೊಹಮ್ಮದ ಸಾಬ ಲಾಹೋರಿ, ಪುರಸಭೆ ಮಾಜಿ ಸದಸ್ಯ ಮಂಜೂರ ಅಲಿ ಬೇಪಾರಿ, ಮುಖಂಡರಾದ ಸಿದ್ದನಗೌಡ ಪಾಟೀಲ (ನಾವದಗಿ), ಪ್ರಭುಗೌಡ ಮದರಕಲ್ಲ, ಉಮರ ಮೂಲಿಮನಿ (ನಾಲತವಾಡ), ಶಾಸಕರ ಆಪ್ತ ಸಹಾಯಕ ಮಲ್ಲಿಕಾರ್ಜುನ ಬಾಗೇವಾಡಿ ಮತ್ತಿತರರು ಇದ್ದರು.