ತಾಳಿಕೋಟಿ

ಅಂಬೇಡ್ಕರ್ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಅಂಬೇಡ್ಕರ್ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ


ತಾಳಿಕೋಟಿ 17: ವಿಜಯಪುರ ಕೈಗಾರಿಕಾ ಜಿಲ್ಲಾ ಉಪ ನಿರ್ದೇಶಕರು ವಿಜಯಪುರ ಕಾರ್ಯದಲ್ಲಿ ಈಗಾಗಲೇ ಗ್ರಾಮೀಣಮಟ್ಟದ ಬಡ ಕುಶಲ ಕರ್ಮೀಗಳಿಗೆ ಸರ್ಕಾರದಿಂದ ಹೂಲಗೆ ಯಂತ್ರ ಬಡಗಿತನದ ಯಂತ್ರಗಳನ್ನು ಉಚಿತವಾಗಿ ಆನ್ಲೈನ್ ಅರ್ಜಿ ಮುಖಾಂತರ ಕರೆಯಲಾಗಿದೆ.


ಆದರೆ ಈಗ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರು ಆನ್ಲೈನಲ್ಲಿ ಅರ್ಜಿ ಹಾಕಿದ ಫಲಾನುಭವಿಗಳಿಗೆ ಎಲ್ಲಾ ಕಾಗದ ಪತ್ರಗಳನ್ನು ಫೋಟೋ ಹಚ್ಚಿ ಈ ಕಾರ್ಯಾಲಯಕ್ಕೆ ತಂದು ಕೊಡಬೇಕು ಎಂದು ಕೇಳಿಕೊಳ್ಳುತ್ತಿದ್ದು ಇದರಿಂದ ಗ್ರಾಮೀಣ ಭಾಗದ ಜನರಿಗೆ ತುಂಬಾ ತೊಂದರೆಯಾಗುತ್ತದೆ.


ಸರಕಾರ ಬಡವರಿಗೆ ಅನುಕೂಲವಾಗಲಿ ಎಂದು ಆನ್ಲೈನ್ ಅರ್ಜಿ ಮಾಡಿದ್ದು ಇವರು ತಮ್ಮ ಅನುಕೂಲಕ್ಕಾಗಿ ಬಡವರಿಗೆ ತೊಂದರೆ ಕೊಡುತ್ತಿದ್ದಾರೆ ನೂರಕ್ಕೂ ಹೆಚ್ಚು ಕಿಲೋಮೀಟರ್ಯಿಂದ ಇಲ್ಲಿಗೆ ಬಂದು ಹೋಗಲು ತೊಂದರೆ ಆಗುತ್ತಿದ್ದು ಅದಕ್ಕಾಗಿ ಕೂಡಲೇ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಡ ಕುಶಲಕರ್ಮಿಗಳಿಗೆ ಸಲಿಕರಣಗಳನ್ನು ಒದಗಿಸಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಅಂಬೇಡ್ಕರ್ ಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾ ಉಪಾಧ್ಯಕ್ಷ ಬಸ್ಸು ಈ ಮಾದರ ಮಾತನಾಡಿ ಸರಕಾರ ಬಡವರಿಗೆ ಅನುಕೂಲ ಆಗಲೆಂದು ಆನ್ಲೈನ್ ಅರ್ಜಿ ಮುಖಾಂತರ ಫಲಾನುಭವಿಗಳ ದಾಖಲೆಗಳನ್ನು ಡೌನ್ಲೋಡ್ ಮಾಡಿ ಅರ್ಜಿ ಸಲ್ಲಿಸಲು ಇರುತ್ತದೆ ಇಲ್ಲಿನ ಅಧಿಕಾರಿಗಳು ಆನ್ಲೈನ್ ಅರ್ಜಿಯ ಕುಂಟು ಇಲ್ಲಿಗೆ ಬಂದು ಕಾಗದಪತ್ರ ಸಮೇತ ದುಡ್ಡು ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದು ಮತ್ತು ಯಾರು ಬಂದು ಇವರನ್ನು ಸಂಪರ್ಕ ಮಾಡುವುದಿಲ್ಲ ಅಂಥವರ ಅರ್ಜಿಯನ್ನು ನಿಮ್ಮ ಅರ್ಜಿ ಸರಿಯಾಗಿ ಸ್ಕ್ಯಾನ್ ಆಗಿಲ್ಲ ಅದು ಇಲ್ಲ ಇದು ಇಲ್ಲಾ ಅಂದು ತಿರಸ್ಕಾರ ಮಾಡುತ್ತಾರೆ.


ಅದಕ್ಕಾಗಿ ಜಿಲ್ಲಾಧಿಕಾರಿಗಳಾದ ತಾವು ಖುದ್ದು ಕೂಡಲೇ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿರುವ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕು ಇಲ್ಲವಾದಲ್ಲಿ ಅಂಬೇಡ್ಕರ್ ಸೇನೆಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ರಮೇಶ್ ದೊಡ್ಡಮನಿ, ಶಂಕರ್ ಮಾದರ ಉಪಸ್ಥಿತರಿದ್ದರು. 


ಸುದ್ದಿ ಓದಿ