ತಾಳಿಕೋಟಿ

ವಾಲ್ಮೀಕಿ ಜಯಂತಿ ಸಿದ್ಧತೆ ಕುರಿತು ಸಭೆ

ವಾಲ್ಮೀಕಿ ಜಯಂತಿ ಸಿದ್ಧತೆ ಕುರಿತು ಸಭೆ


ತಾಳಿಕೋಟಿ 16: ಅಕ್ಟೋಬರ್ 26ರಂದು ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಚರಿಸಲಿರುವ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಸಿದ್ಧತಾ ಸಭೆ ಶುಕ್ರವಾರ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಿತು.  

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಂ.ಎಸ್‌. ಅರಕೇರಿ ಅವರು, ಜಯಂತಿ ಕಾರ್ಯಕ್ರಮದ ಎಲ್ಲ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಜಿ. ಮಠ ಅವರು ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು.  

ಅಕ್ಟೋಬರ್ 26ರಂದು ಬೆಳಿಗ್ಗೆ 8 ಗಂಟೆಗೆ ತಹಶೀಲ್ದಾರ್ ಕಾರ್ಯಾಲಯ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಅರ​‍್ಿಸಲಾಗುವುದು. ಬೆಳಿಗ್ಗೆ 10 ಗಂಟೆಗೆ ದೇವರ ಹಿಪ್ಪರಗಿ ರಸ್ತೆಯ ವಾಲ್ಮೀಕಿ ವೃತ್ತದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜದ ಸಹಯೋಗದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಬಳಿಕ ಸಮೀಪದ ವಾಲ್ಮೀಕಿ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.  

ಸ್ಥಳೀಯ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಎಸ್‌.ಎಂ. ಪಡಶೆಟ್ಟಿ ಉಪಸ್ಥಿತರಿದ್ದರು. ಸಿಆರ್ಸಿ ರಾಜು ವಿಜಾಪುರ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಸವರಾಜ ದೇವದುರ್ಗ, ಯಮನಪ್ಪ ಬರದೇನಾಳ, ಕಾಶಿನಾಥ ಪಾಟೀಲ, ಹಣಮಂತ ಮೇಲಿನಮನಿ, ಅಶೋಕ ಅಸ್ಕಿ, ಕುಮಾರ ಅಸ್ಕಿ, ಸಾಹೇಬಣ್ಣ ತಳಹಳ್ಳಿ, ಮಡಿವಾಳಪ್ಪ ನಾಯ್ಕೋಡಿ, ಜಿ.ಜಿ. ಮದರಕಲ್, ಬಸ್ಸು ಮಾದರ, ಗೋಪಾಲ ಕಟ್ಟಿಮನಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ