ಬೆಳಗಾವಿ

ಚಿಕ್ಕೋಡಿ ಕಡೆಗೆ ತೆರಳುತ್ತಿದ್ದ ಬೈಕ್ ಸವಾರ ಅಪಘಾತದಲ್ಲಿ ಸಾವು

ಚಿಕ್ಕೋಡಿ ಕಡೆಗೆ ತೆರಳುತ್ತಿದ್ದ ಬೈಕ್ ಸವಾರ ಅಪಘಾತದಲ್ಲಿ ಸಾವು


ಚಿಕ್ಕೋಡಿ 16 : ತಾಲೂಕಿನ ಯಕ್ಸಂಬಾ-ಚಿಕ್ಕೋಡಿ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಿವೃತ್ತ ಕೆಎಸ್‌ಆರ್ಟಿಸಿ ಕಂಡಕ್ಟರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಕ್ಸಂಬಾ ನಿವಾಸಿ ಗಣಪತಿ ಶಂಕರ ಮೋಪಗಾರ (63) ಅವರು ಬೈಕ್ನಲ್ಲಿ ಚಿಕ್ಕೋಡಿ ಕಡೆಗೆ ತೆರಳುತ್ತಿದ್ದ ವೇಳೆ, ರಸ್ತೆ ಬದಿ ನಿಲ್ಲಿಸಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದ್ದಾರೆ. ಆರೋಪಿ ಟ್ರಕ್ ಚಾಲಕ ಬಾಲು ರಾಠೋಡ ತನ್ನ ಟ್ರಕ್ ಅನ್ನು ಯಾವುದೇ ಸೂಚನಾ ಫಲಕ ಅಥವಾ ಇಂಡಿಕೇಟರ್ ಇಲ್ಲದೆ ರಸ್ತೆ ಮೇಲೆ ನಿಲ್ಲಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ತಲೆಗೆ ತೀವ್ರ ಗಾಯಗೊಂಡಿದ್ದ ಗಣಪತಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಈ ಸಂಬಂಧ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ