ಬೆಳಗಾವಿ

ಸಂಬರಗಿ: ಕಬ್ಬಿಗೆ ನ್ಯಾಯಯುತ ಬೆಲೆಗೆ ಆಗ್ರಹ

ಸಂಬರಗಿ: ಕಬ್ಬಿಗೆ ನ್ಯಾಯಯುತ ಬೆಲೆಗೆ ಆಗ್ರಹ


ಸಂಬರಗಿ 16: ಗಡಿ ಭಾಗದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವವರೆಗೆ ರೈತರು ಕಬ್ಬು ಕಟಾವು ಮಾಡಬಾರದು. ಕಟಾವು ಮಾಡಿದರೆ ಪ್ರತಿಭಟನೆ ನಡೆಸಿ ವಾಹನಗಳನ್ನು ತಡೆಹಿಡಿಯಲಾಗುವುದು ಎಂದು ರೈತ ಸಂಘಟನೆಯ ಯುವ ನಾಯಕ ಕಿರಣ್ ಮಿಸಾಳ ಎಚ್ಚರಿಕೆ ನೀಡಿದ್ದಾರೆ.  

ಸಂಬರಗಿಯಲ್ಲಿ ಮಾತನಾಡಿದ ಅವರು, ರೈತರಿಗೆ ನ್ಯಾಯಯುತ ಬೆಲೆ ದೊರೆಯಬೇಕು. ಪ್ರತಿ ಟನ್ ಕಬ್ಬಿಗೆ 5,000ರಿಂದ 5,500 ದರ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಎಥನಾಲ್ ಖರೀದಿ ದರವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಬೆಲೆ ಘೋಷಿಸುವವರೆಗೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸದಂತೆ ಆಡಳಿತ ಮಂಡಳಿಗೆ ತಿಳಿಸಲಾಗಿದೆ.

ಗಡಿ ಭಾಗದಲ್ಲಿ ನೀರಿನ ಕೊರತೆಯ ನಡುವೆಯೂ ರೈತರು ಕಬ್ಬು ಬೆಳೆದಿದ್ದು, ಅವರಿಗೆ ಸೂಕ್ತ ಬೆಲೆ ದೊರೆಯುವಂತೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.  ಮಹಾರಾಷ್ಟ್ರದ ಭಾಗಮತಿ ಸಕ್ಕರೆ ಕಾರ್ಖಾನೆ ಟನ್ ಕಬ್ಬಿಗೆ 4,000 ದರ ಘೋಷಿಸಿದ್ದರೂ, ರೈತ ಸಂಘಟನೆಗಳು ಅದಕ್ಕೆ ಒಪ್ಪಿಲ್ಲ ಎಂದು ತಿಳಿಸಿದರು. 


ಸುದ್ದಿ ಓದಿ