ಚೆಸ್‌ದಲ್ಲಿ ರಾಜ್ಯಮಟ್ಟಕ್ಕೆ ಭೂಮಿಕಾ ಮಡ್ಡಿ ಆಯ್ಕೆ
ತಾಳಿಕೋಟಿ: ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ಮಡ್ಡಿ (ಗ-17) ಹಾಗೂ ಆಕ್ಸ್ಫರ್ಡ್ ಪಾಟೀಲ್ ಬಿದರಕುಂದಿ ಶಾಲೆ ವಿದ್ಯಾರ್ಥಿನಿ ಸ್ಪೂರ್ತಿ ಹರ್ನಾಳ (ಗ-17) ಇವರುಗಳು ದಿನಾಂಕ 12/10/2016 ರಂದು ಬಬಲೇಶ್ವರದಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿನಿಯರ ಈ ಅಭೂತ ಪೂರ್ವ ಸಾಧನೆಗೆ ಶಾಲೆಯ ಪ್ರಾಂಶುಪಾಲರಾದ ಚಂದ್ರಶೇಖರ ಸಜ್ಜನ , ದೈಹಿಕ ಶಿಕ್ಷಣ ಶಿಕ್ಷಕರಾದ ವಿಜಯಮಹಾಂತೇಶ ಸ್ಥಾವರಮಠ, ನಿಲಯಪಾಲಕರಾದ ಸೋಮನಗೌಡ ಮರಡ್ಡಿ ಹಾಗೂ ತಮದಡ್ಡಿ ಮತ್ತು ಆಕ್ಷಫರ್ಡ ಪಾಟೀಲ ಶಾಲೆಯ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.