ಯರಗಟ್ಟಿ

ಧಾರ್ಮಿಕ ಆಚರಣೆಗಳು ಜನರಿಗೆ ಆದ್ಯಾತ್ಮಿಕ ಶಕ್ತಿ : ಕಟಕೋಳ ಶ್ರೀ

ಧಾರ್ಮಿಕ ಆಚರಣೆಗಳು ಜನರಿಗೆ ಆದ್ಯಾತ್ಮಿಕ ಶಕ್ತಿ : ಕಟಕೋಳ ಶ್ರೀ

ಲೋಕದರ್ಶನ ವರದಿ 

ಯರಗಟ್ಟಿ 21 : ಪುರಾತನ ಪರಂಪರೆ ಧಾರ್ಮಿಕ ಆಚರಣೆಗಳು ಜನರಿಗೆ ಆದ್ಯಾತ್ಮಿಕ ಶಕ್ತಿ ನೀಡುವ ಜತೆಗೆ ಸದ್ಗುಣವಂತರಾಗಲು ಪ್ರೇರಣೆ ನೀಡುತ್ತವೆ ಎಂದು ಕಟಕೋಳ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ ಹೇಳಿದರು. 


ಸಮೀಪದ ಯರಝರ್ವಿ ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಹಬ್ಬದ ನಿಮಿತ್ಯ ಹಮ್ಮಿಕೊಂಡಿದ್ದ 25ನೇ ವರ್ಷದ ಬೆಳ್ಳಿ ಹಬ್ಬದ ಮಹೋತ್ಸವ ಹಾಗೂ ದೇವಿಯ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶರನ್ನವರಾತ್ರಿಯ ಒಂಬತ್ತು ದಿನಗಳ ಪಯಂರ್ತ ಉಪವಾಸ ಸ್ವಾಧ್ಯಾಯದಲ್ಲಿ ತೊಡಗಿಸಿಕೊಂಡರೆ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದರು.


ಯರಗಟ್ಟಿಯ ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ  ಅವರು ನವರಾತ್ರಿ ಆಚರಣೆಯನ್ನು ವಿಶೇಷತೆ ಕುರಿತು ಉಪನ್ಯಾಸ ನೀಡಿದರು. ಹಿಂದೂ ಧರ್ಮದಲ್ಲಿ ನವರಾತ್ರಿಯ ಒಂಬತ್ತು ದಿನಗಳಲ್ಲಿ ದುರ್ಗಾ ದೇವಿಯ ಒಂಬತ್ತು ವಿವಿಧ ರೂಪಗಳನ್ನು (ನವದುರ್ಗೆಯರು) ವಿಶೇಷವಾಗಿ ಪೂಜಿಸಲಾಗುತ್ತದೆ.  


ಸುದ್ದಿ ಓದಿ