ಯರಗಟ್ಟಿ

ತಲ್ಲೂರಿನಲ್ಲಿ ರಾಣಿ ಚೆನ್ನಮ್ಮ ವಿಜಯಜ್ಯೋತಿ ಮೆರವಣಿಗೆಗೆ ಸಂಭ್ರಮದ ಸ್ವಾಗತ

ತಲ್ಲೂರಿನಲ್ಲಿ ರಾಣಿ ಚೆನ್ನಮ್ಮ ವಿಜಯಜ್ಯೋತಿ ಮೆರವಣಿಗೆಗೆ ಸಂಭ್ರಮದ ಸ್ವಾಗತ

ಲೋಕದರ್ಶನ ವರದಿ 


ಯರಗಟ್ಟಿ 21 : ರಾಣಿ ಚನ್ನಮ್ಮ ಅವರು ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಮಾದರಿಯಾಗಿದ್ದಾರೆ. ಅವರ ಇತಿಹಾಸ ಮತ್ತು ವೀರಾವೇಷದ ಹೋರಾಟದ ನೆನಪುಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವುದು ಈ ಜ್ಯೋತಿಯ ಮುಖ್ಯ ಉದ್ದೇಶವಾಗಿದೆ ಎಂದು ತಹಶೀಲ್ದಾರ ಎಂ.ವ್ಹಿ.ಗುಂಡಪ್ಪಗೋಳ ಹೇಳಿದರು. 

ತಾಲೂಕಿನ  ತಲ್ಲೂರ ಗ್ರಾಮದಲ್ಲಿ ಇತ್ತಿಚಿಗೆ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಜ್ಯೋತಿಯನ್ನು ಬರಮಾಡಿಕೊಂಡು ಮಾತನಾಡಿದರು, ಕಿತ್ತೂರು ಸಂಸ್ಥಾನದ ದೊರೆ ಮಲ್ಲಸರ್ಜನ ಮೊದಲನೇಯ ಧರ್ಮಪತ್ನಿ ರಾಣಿ ರುದ್ರಮ್ಮ ಅವರು ತಲ್ಲೂರು ಶ್ರೀಮಂತ ದೇಸಾಯಿಯವರ ತವರು ಮನೆಗೆ ಜ್ಯೋತಿಯು ಬಂದಿರುವದು ಸಂತಸವಾಗಿದೆ,

ಮುಂದಿನ ದಿನಗಳಲ್ಲಿ ಶ್ರೀಮಂತ ವಿನಯಕುಮಾರ ದೇಸಾಯಿಯವರ ವಾಡೆಯಲ್ಲಿ ರಾಣಿ ರುದ್ರಮ್ಮ ಅವರ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಲು ತಿಳಿಸಿರುವದು ನಮಗೆಲ್ಲ ಸಂತಸವಾಗಿದೆ ಎಂದು ತಿಳಿಸಿದರು. 

ರಾಣಿ ರುದ್ರಮ್ಮ ಅವರ ಜನ್ಮಸ್ಥಳವಾದ ತಲ್ಲೂರ ಗ್ರಾಮದಲ್ಲಿ ಪ್ರವಾಸಿ ಮಂದಿರ, ಕಾಲೇಜು, ರಾಣಿ ರುದ್ರಮ್ಮಾ ಪಾರ್ಕಗಳು ನಿರ್ಮಾಣವಾಗಬೇಕು ಎಂದು ತಿಳಸಿದರು. 

ಮಾಜಿ ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ ಹಾಗೂ ಅವರ ಕುಟುಂಬದವರು, ಗ್ರಾಮಸ್ಥರು ಕಿತ್ತೂರ ರಾಣಿ ಚೆನ್ನಮ್ಮಾ ವಿಜಯ ಜ್ಯೋತಿ ರಥಕ್ಕೆ ವಿಷೇಶವಾಗಿ ಪೂಜೆಯನ್ನು ಸಲ್ಲಿಸಿ ಬರಮಾಡಿಕೊಂಡರು. ಈ ಯಾತ್ರೆಯಲ್ಲಿ ಮಹಿಳೆಯರಿಂದ ಕುಂಭಮೇಳ, ಆರತಿ ಡೋಳ್ಳು, ಕರಡಿ ಮಜಲು ಮೆರಗು ತಂದವು.  


ಸುದ್ದಿ ಓದಿ