ವಾಣಿಜ್ಯ ನಗರ ರಾಣೆಬೆನ್ನೂರಲ್ಲಿ ರಾಜ್ಯಮಟ್ಟದ ಪತ್ರಿಕಾ ಸಂಪಾದಕರ ಸಮ್ಮೇಳನ ನಾಳೆ
ರಾಣೆಬೆನ್ನೂರು 23: ಉತ್ತರ ಕರ್ನಾಟಕದ ಹೆಬ್ಬಾಗಿಲು ವಾಣಿಜ್ಯ ನಗರ ರಾಣೆಬೆನ್ನೂರಲ್ಲಿ ಇದೇ ಪ್ರಥಮ ಬಾರಿಗೆ, ರಾಜ್ಯಮಟ್ಟದ ಪತ್ರಿಕಾ ಸಂಪಾದಕರ ರಾಜ್ಯ ಸಮ್ಮೇಳನವು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಿಡ್ಲು ಪ್ರಾದೇಶಿಕ ಕನ್ನಡ ದಿನಪತ್ರಿಕೆ ಸಹ ಸಂಪಾದಕ ಎಸ್. ಜಿ. ಮಹಾನುಭಾವಿಮಠ ಹೇಳಿದರು.
ಅವರು ಶುಕ್ರವಾರ ಈ ಕುರಿತು ಮಾಧ್ಯಮದೊಂದಿಗೆ ಸಮ್ಮೇಳನ ಸಿದ್ಧತೆ ಕುರಿತು ಮಾತನಾಡಿದರು. ರಾಜ್ಯಮಟ್ಟದ ಪತ್ರಿಕಾ ಸಂಪಾದಕರ ಸಮ್ಮೇಳನವು ವಾಣಿಜ್ಯ ನಗರದಲ್ಲಿ ಆಯೋಜಿಸಬೇಕೆನ್ನುವ ತಮ್ಮ ಬಹು ವರ್ಷಗಳ ಕನಸು ಈ ಸಮ್ಮೇಳನದ ಮೂಲಕ ಇಂದು ನನಸಾಗುತ್ತಲ್ಲಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.
ಶಿಡ್ಲು ಪತ್ರಿಕೆಯ ಸುವರ್ಣ ಮಹೋತ್ಸವ ನವೆಂಬರ್ ತಿಂಗಳಲ್ಲಿ ಏರಿ್ಡಸಲಾಗಿದೆ. ಈ ನಿಮಿತ್ತವಾಗಿ ರಾಜ್ಯ ಮಟ್ಟದ ಪತ್ರಿಕಾ ಸಂಪಾದಕರ ಸಮ್ಮೇಳನವು ಏರಿ್ಡಸಲಾಗಿದ್ದು, ನಗರ ಹೂರ ವಲಯದ ಶ್ರೀ ಜಗದ್ಗುರು ತರಳಬಾಳು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಾಳೆ ಅಕ್ಟೋಬರ್ 25, ರಂದು ರವಿವಾರ ಮುಂಜಾನೆ 10-30 ಗಂಟೆಗೆ ಏಷ್ಯಾ ನ್ಯೂಸ್ ನೆಟ್ ಸುವರ್ಣ ಟಿ.ವಿ. ಸಂಪಾದಕ, ಅಜಿತ್ ಹನುಮಕ್ಕನವರ ಉದ್ಘಾಟಿಸಿ ಸಮ್ಮೇಳನಕ್ಕೆ ಚಾಲನೆ ನೀಡುವರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶಾನಂದ ಜಿ ಮಹಾರಾಜ್ ಅವರ ದಿವ್ಯ ಸಾನಿಧ್ಯದಲ್ಲಿ, ಸರ್ವಜ್ಞ ಸಂಪಾದಕ ಎಸ್. ಜಿ. ಮಮಠ ಅವರು ಅಧ್ಯಕ್ಷತೆ ವಹಿಸುವರು. ಅಜಿತ್ ಹನುಮಕ್ಕನವರ ಅವರು ಸಮ್ಮೇಳನ ಉದ್ಘಾಟಿಸುವರು.
ಜವಳಿ ಸಕ್ಕರೆ ಸಚಿವರು ರುದ್ರ್ಪ ಲಮಾಣಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕ ಪ್ರಕಾಶ ಕೋಳಿವಾಡ, ಹುಬ್ಬಳ್ಳಿ ಧಾರವಾಡ ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಅರುಣ ಕುಮಾರ ಪೂಜಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಶ್ರೀಮತಿ ಆಯಿಷಾ ಖಾನಂ, ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಸಂಯುಕ್ತ ಕರ್ನಾಟಕ ಸಂಪಾದಕ ಮಹಾಬಲ ಶೀತಲಬಾವಿ, ವಿಜಯ ಕರ್ನಾಟಕ ಸಂಪಾದಕ ಬಂಡು ಕುಲಕರ್ಣಿ, ಇಂದಿರಾ ಗಾಂಧಿ ಮು. ವಿ. ವಿ ವಿಶ್ರಾಂತ ನಿರ್ದೇಶಕ ಡಾ. ಜಿ. ಹೆಚ್. ಇಮ್ರಾಪುರ, ಸುಧಾ ವಾರಪತ್ರಿಕೆ ಸಂಪಾದಕ ಶ್ರೀಮತಿ ರಶ್ಮಿ ಎಸ್, ಕನ್ನಡಪ್ರಭ ಸಮನ್ವಯ ಸಂಪಾದಕ ಬಿ.ವಿ. ಮಲ್ಲಿಕಾರ್ಜುನಯ್ಯ, ಕಾ.ನಿ ಪ. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಾರ್ಯದರ್ಶಿ ಜೆ.ಸಿ. ಲೋಕೇಶ್, ವಿಜಯಪುರ ಅಕ್ಕಮಹಾದೇವಿ ವಿ.ವಿ. ಪ್ರೊ, ಓಂಕಾರ ಕಾಕಡೆ, ಜನತಾವಾಣಿ ಸಂಪಾದಕ, ಎಂ. ಎಂ. ವಿಕಾಶ, ವಿಶ್ರಾಂತ ನ್ಯಾಯಾಧೀಶ, ಎಸ್.ಬಿ.
ವಸ್ತ್ರದಮಠ, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ದೂರದರ್ಶನ ವಿಶ್ರಾಂತ ನಿರ್ದೇಶಕಿ ನಿರ್ಮಲ ಎಲಿಗಾರ, ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ, ಸ್ಥಾನಿಕ ಸಂಪಾದಕ, ಮಂಜುನಾಥ್ ಕೌರಕ್ಕಳವರ, ಪಾಲ್ಗೊಳ್ಳುವರು.
ಮುಖ್ಯ ಅತಿಥಿಗಳಾಗಿ, ವರ್ತಕ ಎಂ.ಎಸ್. ಆರಕೇರಿ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ, ರೇನ್ಬೋ ಸಂಸ್ಥಾಪಕ ಅಧ್ಯಕ್ಷ ಸಿ.ಟಿ. ಸುರೇಶ, ಎಸ್ಟಿಜೆಐಟಿ ನಿರ್ದೇಶಕ ಮಂಜುನಾಥ ಗುತ್ತಿ, ಪ್ರಾಂಶುಪಾಲ ಡಾಕ್ಟರ್ ಬಿ.ಮಹೇಶ್ವರ್ಪ ಮತ್ತಿತರರು ಪಾಲ್ಗೊಳ್ಳುವರು.