ಹೂವಿನ ಹಡಗಲಿ

ಹೊಳಗುಂದಿ : ಕಿತ್ತೂರು ರಾಣಿ ಜಯಂತಿ ಆಚರಣೆ

ಹೊಳಗುಂದಿ : ಕಿತ್ತೂರು ರಾಣಿ ಜಯಂತಿ ಆಚರಣೆ

ಹೂವಿನಹಡಗಲಿ  23 :  ’ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರು ತೋರಿದಂತಹ ಧೈರ್ಯ, ಸಾಹಸ ನಾಡಿನ ಪ್ರತಿಯೊಬ್ಬ ಮಹಿಳೆಗೂ ಆದರ್ಶ ವಾಗಿದ್ದಾಳೆ ಎಂದು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪರಮೇಶಪ್ಪ ಹೇಳಿದರು.ತಾಲ್ಲೂಕಿನ ಹೊಳಗುಂದಿ ಗ್ರಾಮ ಪಂಚಾಯತಿ  ವತಿಯಿಂದ ಶುಕ್ರವಾರ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.ರಾಣಿ ಚನ್ನಮ್ಮಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಗ್ರಾ.ಪಂ.ಮಾಜಿ ಸದಸ್ಯ ರುದ್ರಗೌಡ ಮಾತನಾಡಿ’ಚನ್ನಮ್ಮ ಅವರ ಜೀವನ ಮತ್ತು ಹೋರಾಟ ನಾಡಿನ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿದಾಯಕವಾಗಿದೆ. ಮಹಿಳೆಯರು ಕೂಡ ಸ್ವಾವಲಂಬಿಗಳಾಗಿ ಶೋಷಣೆ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮಾಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು’ ಎಂದರು.ಗ್ರಾ.ಪಂ.ಮಾಜಿ ಅದ್ಯಕ್ಷ ಧನರಾಜ,ಮಾಜಿ ಉಪಾಧ್ಯಕ್ಷ ಗುರುಬಸವರಾಜ, ವಿಎಸ್‌ಎಸ್ ಎನ್ ಮಾಜಿ ಅದ್ಯಕ್ಷ ಕಾತ್ರಿಕಿ  ಕರಿಬಸವರಾಜ,ಬಾವಿಹಳ್ಳಿ ಕೊಟ್ರೇಶಪ್ಪ, ಹಾಲನಗೌಡ,ವಿಶ್ವನಾಥ, ಮುದೇಗೌಡ್ರು ಪ್ರಕಾಶ್ ,  ವೀರೇಶ, ಕೊಟ್ರೇಶ,ಕುಮಾರ ಎಚ್‌. ಶೆಟ್ಟರ್, ವೀರೇಶ ಸ್ವಾಮಿ, ಮುಗಳಿ ಕರಿಬಸವರಾಜ ಮಸಲ್ವಾಡ ಭಾಷಸಾಹೇಬ ಹಾಗೂ ಪಂಚಾಯತಿ ಸಿಬ್ಬಂದಿ  ಪ್ರಕಾಶ್ , ಯು.ಎಂ. ಶ್ವೇತಾ  ಇದ್ದರು. 


ಸುದ್ದಿ ಓದಿ